

ಪಾಟ್ನಾ: ಆನೆ ನಡದಿದ್ದೇ ದಾರಿ ಎಂಬ ಮಾತಿದೆ. ಇದನ್ನು ಸುಮ್ಮನೆ ಹೇಳುವುದಿಲ್ಲ. ಆನೆಯೂ ತನ್ನ ಕೋಪವನ್ನು ತೋರಿಸಿಕೊಳ್ಳುವುದು ತೀರಾ ಕಡಿಮೆ. ಆನೆಯಿಂದ ತೊಂದರೆಗೊಳಗಾದ ಘಟನೆಗಳು ಆಗಾಗ್ಗೆ ಬರುತ್ತವೆ ಆದರೂ, ಆನೆಯನ್ನು ಕೆಣಕದಿದ್ದರೆ ಅದು ತನ್ನ ದಾರಿಯಲ್ಲಿ ಚಲಿಸುತ್ತದೆ. ಆನೆ ಕೋಪ ಎಂಥದ್ದೂ ಎಂದು ತಿಳಿಯದವರು ಈಗ ಕಣ್ಣಾರೆ ನೊಡಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು (Viral Video) ಹರಿದಾಡುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಆನೆ ಸಿಟ್ಟಿಗೆದ್ದು ಏನೆಲ್ಲಾ ಮಾಡಿದೆ ಮತ್ತು ಆನೆಯ ಬಲ ಎಂಥದ್ದು ಎಂಬುದನ್ನು ನೋಡಬಹುದು. ಈ ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದದ್ದು ಎನ್ನಲಾಗಿದೆ. ವಿಡಿಯೋದಲ್ಲಿ ಆನೆಯೂ ನಡುರಸ್ತೆಯಲ್ಲಿರುವ ಕಾರಿನ ಮೇಲೆ ಹೇಗೆ ಕೋಪ ತೋರಿಸಿದೆ ಎಂಬುದನ್ನು ಕಾಣಬಹುದು. ಆನೆಯು ಕಾರನ್ನು ನೆಲದಿಂದ ಮೇಲಕ್ಕೆತ್ತಿ ಆಟಿಕೆಯಂತೆ ಪಕ್ಕಕ್ಕೆ ಎಸೆಯುತ್ತದೆ. ಅದಕ್ಕೂ ಮುನ್ನ ಸೊಂಡಿಲಿನಿಂದ ಕಾರನ್ನು ಬಡಿಯುತ್ತದೆ.
ಬಳಿಕ ಕಾರಿನ ಪಕ್ಕದಲ್ಲೇ ಇದ್ದ ಬಸ್ಸಿನತ್ತಾ ತೆರಳುತ್ತದೆ. ಚಲಿಸುತ್ತದೆ, ಅದನ್ನು ನೆಲದಿಂದ ಮೇಲಕ್ಕೆತ್ತಲು ಪ್ರಯತ್ನಿಸುತ್ತದೆ ಆದರೆ ಸಾಧ್ಯವಾಗದ ಕಾರಣ ಬಸ್ ಅನ್ನು ಅಲುಗಾಡಿಸಲು ಪ್ರಾರಂಭಿಸುತ್ತದೆ. ಆನೆಯ ಮೇಲೆ ಕುಳಿತಿರುವ ಮಾವುತ ಗಜರಾಜನನ್ನು ತಡೆಯಲು ತನ್ನೆಲ್ಲ ಪ್ರಯತ್ನಗಳನ್ನು ಮಾಡುತ್ತಾನೆ. ಆದರೆ ಅದು ಹಿಡಿತಕ್ಕೆ ಬರುವುದಿಲ್ಲ. ಆನೆಯ ಈ ರೌದ್ರವತಾರವನ್ನು ನೋಡಿ ಜನರು ಬೆಚ್ಚಿಬಿದಿದ್ದಾರೆ.
1.9 ಸೆಕೆಂಡ್ ಇರುವ ಈ ವಿಡಿಯೋ ನೋಡಿ ಕೆಲವರು ಆನೆಯ ಬಲವನ್ನು ಶ್ಲಾಘಿಸಿದರೆ, ಮತ್ತೆ ಕೆಲವರು ಗಜರಾಜನ ಕೋಪ ಅಪಾಯಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಜರಾಜನ ಕೋಪ ತುಂಬಾ ಅಪಾಯಕಾರಿ, ಶಿಫ್ಟ್ಗೆ ಯಾವುದೇ ಗೌರವವಿಲ್ಲ, ಪ್ರಕೃತಿಯ ಶಕ್ತಿಯ ಮುಂದೆ ಯಂತ್ರವೂ ದುರ್ಬಲ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)