

ಲಖನೌ: ನವರಾತ್ರಿಯ ಸಮಯದಲ್ಲಿ ದೇಶದಾದ್ಯಂತ ಅನೇಕ ಸ್ಥಳಗಳಲ್ಲಿ ರಾಮಲೀಲಾವನ್ನು ಆಯೋಜಿಸಲಾಗಿದೆ. ರಾಮಲೀಲಾದಲ್ಲಿ ಕಲಾವಿದರು ಶ್ರೀರಾಮ, ಸೀತೆ, ಲಕ್ಷ್ಮಣ, ರಾವಣ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ರಾಮಲೀಲಾ ನಾಟಕಕ್ಕೆ ಸಂಬಂಧಿಸಿದಂಥೆ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಈ ವಿಡಿಯೋ ಉತ್ತರ ಪ್ರದೇಶದಿಂದ ಬಂದಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿಜಯದಶಮಿಯ ದಿನದಂದು ರಾಮಲೀಲಾ ನಾಟಕವನ್ನು ಪ್ರದರ್ಶಿಸಲಾಗಿದೆ. ರಾಮ ಮತ್ತು ರಾವಣನ ನಡುವಿನ ಯುದ್ಧದ ಸಮಯದಲ್ಲಿ ಇದ್ದಕ್ಕಿದ್ದಂತೆ ಇಬ್ಬರೂ ನಟರು ವೈಯಕ್ತಿಕ ಜಗಳಕ್ಕೆ ಇಳಿದಿದ್ದಾರೆ. ಜಗಳವೂ ಕೈ-ಕೈ ಮೀಲಾಯಿಸುವ ಹಂತಕ್ಕೆ ತಲುಪಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ನಾಟಕಕ್ಕೆ ಅಲಂಕರಿಸಿರುವ ವೇದಿಕೆಯನ್ನು ಕಾಣಬಹುದು. ರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿದೆ. ಲಕ್ಷ್ಮಣ ಕೂಡ ಇದ್ದಾನೆ. ರಾಮ, ಲಕ್ಷ್ಮಣ, ರಾವಣನ ನಡುವಿನ ಯುದ್ಧ ನಡೆಯುವ ದೃಶ್ಯದ ಸಮಯದಲ್ಲಿ ರಾವಣ ಪಾತ್ರಧಾರಿಯು ರಾಮನ ಪಾತ್ರ ಮಾಡುತ್ತಿದ್ದವರನ್ನು ತಳ್ಳುತ್ತಾನೆ. ಬ್ಯಾಲೆನ್ಸ್ ತಪ್ಪಿ ರಾಮ ಪಾತ್ರಧಾರಿ ಕೆಳಗೆ ಬೀಳುವುದನ್ನು ನೋಡಬಹುದು. ಕೋಪಗೊಂಡ ರಾಮ ಪಾತ್ರಧಾರಿ ರಾವಣ ಪಾತ್ರಧಾರಿ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಇಬ್ಬರೂ ಜಗಳ ಆರಂಭವಾಗುತ್ತಿದ್ದಂತೆ ಅಲ್ಲಿದ್ದವರು ವೇದಿಕೆ ಮೇಲೆ ಹೋಗಿ ಜಗಳ ನಿಲ್ಲಿಸಲು ಪ್ರಯತ್ನಿಸುವುದನ್ನು ನೋಡಬಹುದಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ವೀಕ್ಷಿಸಿ ಲೈಕ್ಗಳನ್ನು ನೀಡಿದ್ದಾರೆ. ರಾಮಾಯಣದಲ್ಲಿ ಮಹಾಭಾರತ ಇದು ತಪ್ಪು, ಹರಿದ್ವಾರದ ರಾಮಲೀಲಾಗೆ ಹೋಲಿಸಿದರೆ ಇದು ಏನೂ ಅಲ್ಲ, ಈ ವಿಷಯ ವೈಯಕ್ತಿಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)