ಖರೀದಿಸಿದ ಪ್ಯಾಂಟ್​ನ ಜೇಬಿನಲ್ಲಿ 10 ಯೂರೋ ಪತ್ತೆ; Viral Post ನೋಡಿ ನೆಟ್ಟಿಗರು ರಿಯಾಕ್ಷನ್​ ಹೀಗಿದೆ

blank

ನವದಹೆಲಿ: ಅದು ಜನಪಥ್ ಮಾರುಕಟ್ಟೆಯಾಗಿರಲಿ, ಸರೋಜಿನಿ ನಗರವಾಗಿರಲಿ ಅಥವಾ ದರಿಯಾಗಂಜ್‌ನ ಭಾನುವಾರದ ಬಜಾರ್ ಆಗಿರಲಿ… ದೆಹಲಿಯ ಇಂತಹ ಹಲವು ಮಾರುಕಟ್ಟೆಗಳಲ್ಲಿ ನೀವು ಅತ್ಯಂತ ಕಡಿಮೆ ಬೆಲೆಯ ಸರಕುಗಳನ್ನು ಪಡೆಯಬಹುದು!(Viral Post)

ಇದನ್ನು ಓದಿ: ಪುಟ್ಟ ಪೋರಿಯ ಬ್ಯಾಟಿಂಗ್​ಗೆ ನೋಡುಗರು ಫಿದಾ; Viral Video ನೋಡಿ ರೋಹಿತ್ ಶರ್ಮಾರ ಪ್ರತಿಕೃತಿ ಎಂದು ಹೊಗಳಿದ ನೆಟ್ಟಿಗರು 

ಇಲ್ಲಿ 150 ರೂಪಾಯಿಗೆ ತೆಗೆದುಕೊಳ್ಳಿ… ಅಥವಾ 300 ರೂಪಾಯಿಗೆ ತೆಗೆದುಕೊಳ್ಳಿ… ಎಂಬಂತಹ ಹಲವು ಧ್ವನಿಗಳು ಕೇಳುತ್ತವೆ. ಇಷ್ಟು ಕಡಿಮೆ ಬೆಲೆಯಲ್ಲಿ ಜನರು ಚಳಿಗಾಲದಲ್ಲಿ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಮಾತ್ರವಲ್ಲದೆ ಜಾಕೆಟ್‌ಗಳು ಇತ್ಯಾದಿಗಳನ್ನು ಸಹ ಖರೀದಿಸುತ್ತಾರೆ. ಇತ್ತೀಚೆಗೆ ಮಹಿಳೆಯೊಬ್ಬರು ದೆಹಲಿಯ ಪ್ರಸಿದ್ಧ ಜನಪಥ್ ಮಾರುಕಟ್ಟೆಯಿಂದ ಪ್ಯಾಂಟ್ ಖರೀದಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಮತ್ತು ಅದರ ಜೇಬಿನಲ್ಲಿ ಆಘಾತಕಾರಿ ವಸ್ತುವೊಂದು ಸಿಕ್ಕಿದ್ದಾಗಿ ತಿಳಿಸಿದ್ದಾರೆ.

ಖರೀದಿಸಿದ ಹೊಸ ಪ್ಯಾಂಟ್​ನ ಜೇಬಿನಲ್ಲಿ 5 ಯೂರೋಗಳ ಎರಡು ಕರೆನ್ಸಿ ನೋಟುಗಳು ಪತ್ತೆಯಾಗಿದೆ. ಅಂದರೆ ಪ್ಯಾಂಟ್ ಜೇಬಿನಲ್ಲಿ ಒಟ್ಟು 10 ಯೂರೋಗಳು ಪತ್ತೆಯಾಗಿವೆ. ಆಕೆ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪೋಸ್ಟ್​ ಹಂಚಿಕೊಳ್ಳುವಾಗ ಫ್ರೆಂಡ್ಸ್… ನಾನು ಜನಪಥ್​ನಿಂದ ಖರೀದಿಸಿದ ಪ್ಯಾಂಟ್ ಜೇಬಿನಲ್ಲಿ 10 ಯೂರೋಗಳು ಸಿಕ್ಕದೆ. ಭಾರತೀಯ ಕರೆನ್ಸಿಯಲ್ಲಿ 10 ಯುರೋಗಳು ಸರಿಸುಮಾರು 933.68 ರೂ.ಗಳಾಗಿವೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​ ಅನ್ನು ಇದುವರೆಗೂ 3 ಲಕ್ಷ 46 ಸಾವಿರ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಸೆಕೆಂಡ್ ಹ್ಯಾಂಡ್ ಪೇಂಟ್‌ನ ಪ್ರಯೋಜನಗಳು, ಇನ್ನೊಂದು ಪ್ಯಾಂಟ್ ಖರೀದಿಸಿ, ಇದನ್ನು ಅದೃಷ್ಟ ಎಂದು ಕರೆಯಲಾಗುತ್ತದೆ, ಕ್ಯಾಶ್‌ಬ್ಯಾಕ್ ಕೂಡ ಸಿಕ್ಕಿತು, ಒಂಬತ್ತು ನೂರು ರೂಪಾಯಿಗಳಲ್ಲಿ ಒಂದು ಅಥವಾ ಎರಡು ಪ್ಯಾಂಟ್‌ಗಳನ್ನು ಖರೀದಿಸಿ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ನಿರರ್ಗಳವಾಗಿ ಮಲಯಾಳಂ ಮಾತನಾಡಿದ ವಿದೇಶಿ ಮಹಿಳೆ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…