

Peelings song : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಡಿಸೆಂಬರ್ 5ರಂದು ಬಿಡುಗಡೆಯಾದ ಈ ಸಿನಿಮಾ ಸುಮಾರು 1700 ಕೋಟಿ ರೂ.ಗೂ ಅಧಿಕ ಹಣ ಗಳಿಸಿದೆ ಎನ್ನಲಾಗಿದೆ. ಈಗಲೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಹಾಡುಗಳು ಕೂಡ ಸಿಕ್ಕಾಪಟ್ಟೆ ಹಿಟ್ ಆಗಿವೆ. ಸಾಮಾಜಿಕ ಜಾಲತಾಣವಂತೂ ಈ ಚಿತ್ರದ ಹಾಡುಗಳಿಂದಲೇ ತುಂಬಿ ಹೋಗಿದೆ.
ಕಿಸಿಕ್ ಕಿಸಿಕ್... ಸೂಸೆಕಿ ಮತ್ತು ಪೀಲಿಂಗ್ಸ್ ಸಾಂಗ್ಸ್ ಪ್ರೇಕ್ಷಕರ ಮನ ಗೆದ್ದಿದೆ. ಅದರಲ್ಲೂ ಪೀಲಿಂಗ್ಸ್ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದಕ್ಕೆ ಕಾರಣ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಸಖತ್ತಾಗಿ ಹೆಜ್ಜೆ ಹಾಕಿರುವುದು. ಇದೇ ಹಾಡಿಗೆ ಅನೇಕರು ಸೊಂಟ ಬಳುಕಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಗಳನ್ನು ಹರಿಬಿಟ್ಟಿದ್ದಾರೆ. ಕೆಲವು ರೀಲ್‌ಗಳಂತೂ ಸಿಕ್ಕಾಪಟ್ಟೆ ವೈರಲ್ ಆಗಿವೆ. ಆದರೆ, ಈ ಒಂದು ರೀಲ್ ಮಾತ್ರ ಅದೆಲ್ಲವನ್ನು ಮೀರಿಸಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಯುವಕ-ಯುವತಿಯರು ಸಿನಿಮಾ ಹಾಡಿಗೆ ಸೊಂಟ ಬಳುಕಿಸಿ ರೀಲ್ಸ್ ಮಾಡುವುದನ್ನು ನೋಡಿರುತ್ತೀರಿ. ಆದರೆ, ಇತ್ತೀಚಿಗೆ ವೈರಲ್ ಆಗಿರುವ ರೀಲ್ನಲ್ಲಿ ವೃದ್ಧೆಯೊಬ್ಬರು ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಇಳಿ ವಯಸ್ಸಿನಲ್ಲಿ ವೃದ್ಧೆ ಕುಣಿದು ಕುಪ್ಪಳಿಸಿರುವ ರೀತಿಯನ್ನು ಕಂಡು ಜನರು ಆಶ್ಚರ್ಯಚಕಿತರಾಗುತ್ತಿದ್ದಾರೆ. ಅಜ್ಜಿಯು "ಪೀಲಿಂಗ್ಸ್" ಹಾಡಿನಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಅವರ ಸ್ಟೆಪ್‌ಗಳಿಗೆ ಸರಿ ಸಮಾನವಾಗಿಯೇ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಅದನ್ನು ನೋಡಿದವರು ಅಜ್ಜಿಯನ್ನು ಹೊಗಳುತ್ತಿದ್ದಾರೆ.
ಮೆಗಾ ಫ್ಯಾಮಿಲಿ ಫ್ಯಾನ್ ಫಾರೆವರ್ ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಈವರೆಗೂ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲೇ ಈ ಅಜ್ಜಿ ಹೀಗೆ ಡಾನ್ಸ್ ಮಾಡಬೇಕಾದರೆ, ಯುವತಿಯಾಗಿದ್ದಾಗ ಯಾವ ರೇಂಜ್ನಲ್ಲಿ ನೃತ್ಯ ಮಾಡಿರಬಹುದು? ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)