ಮುಸ್ಲಿಂ ಯುವಕನನ್ನು ವರಿಸಿದ ಹಿಂದು ಹುಡುಗಿ; ಮಗಳ ಹೆಸರಿನಲ್ಲಿ ತಿಥಿಯೂಟ ಬಡಿಸಿದ ಪಾಲಕರು

Death
Published on

ಮಧ್ಯ ಪ್ರದೇಶ: ಹಿಂದು ಹುಡುಗಿಯೊಬ್ಬಳು ಮನೆಯವರನ್ನು ಧಿಕ್ಕರಿಸಿ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿದ್ದಾಳೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು, ಆಕೆ ಬದುಕಿರುವಾಗಲೇ ತಿಥಿ ಕಾರ್ಯ ಮಾಡಿ, ಊರಿಗೆಲ್ಲಾ ಊಟ ಹಾಕಿರುವ ಘಟನೆ ಜಬಲ್‌ಪುರದಲ್ಲಿ ನಡೆದಿದೆ. ಕಳೆದ ಭಾನುವಾರ ನರ್ಮದಾ ನದಿಯ ದಡದಲ್ಲಿರುವ ಗೌರಿಘಾಟ್​ನಲ್ಲಿ ಪಾಲಕರು ಪಿಂಡ ಪ್ರದಾನ ಮಾಡಿ, ಅಂತ್ಯಕ್ರಿಯೆ ಮಾಡಿದ್ದಾರೆ.

ಅನಾಮಿಕಾ ದುಬೆ ಎಂಬಾಕೆ ಜೂನ್ 7ರಂದು ಮುಸ್ಲಿಂ ಯುವಕನೊಂದಿಗೆ ಕೋರ್ಟ್​ ಮೊರೆ ಹೋಗಿ ರಿಜಿಸ್ಟರ್ ಮದುವೆ ಆಗಿದ್ದಾಳೆ. ಬಳಿಕ ಅನಾಮಿಕಾ ದುಬೆ ತನ್ನ ಹೆಸರನ್ನು ಉಜ್ಮಾ ಫಾತಿಮಾ ಎಂದು ಬದಲಾಯಿಸಿಕೊಂಡು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಆಕೆಯ ಮನೆಯವರು ಕುಟುಂಬಸ್ಥರನ್ನು ಆಹ್ವಾನಿಸಿ, ಗೌರಿಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಸಿದರು.

ಅನಾಮಿಕಾಳನ್ನು ಮನೆಯಲ್ಲಿ ಪ್ರೀತಿಯಿಂದ ಬೆಳೆಸಿದ್ದೆವು. ಆದರೆ ನಮ್ಮ ಮಾತನ್ನು ವಿರೋಧಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಆಗಿದ್ದಾಳೆ. ಇದರಿಂದ ಇಡೀ ಕುಟುಂಬ ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ. ಹೀಗಿರುವಾಗ ಅನಾಮಿಕಾ ಇನ್ನೂ ಬದುಕಿದ್ದಾಳೆ ಎಂದು ನಾವು ಭಾವಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಪಾಲಿಗೆ ಆಕೆ 'ಇನ್ನಿಲ್ಲ' ಎಂದು ಪಾಲಕರು ಹೇಳಿಕೊಂಡಿದ್ದಾರೆ.

ಅನಾಮಿಕಾಳ ಸಹೋದರ ಅಭಿಷೇಕ್ ದುಬೆ ಪ್ರತಿಕ್ರಿಯಿಸಿ, ಸಹೋದರಿ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆ. ಅವಳ ಹಠ ನಮ್ಮ ಕುಟುಂಬದ ಗೌರವ ಹಾಳು ಮಾಡಿದೆ. ಆಕೆ ಬದುಕಿದ್ದಾಗಲೇ ಪಿಂಡ ಪ್ರದಾನ ಮಾಡಬೇಕಾಗಿ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net