VIDEO: ಲೈವ್ ಮರ್ಡರ್!

LIVE Murder video image
Published on

ಉತ್ತರಪ್ರದೇಶದ ಮೀರತ್‌ನಿಂದ ಬಂದ ಲೈವ್ ಮರ್ಡರ್‌ನ ವಿಡಿಯೋ ಇದು. 19 ವರ್ಷದ ಆಂಚಲ್‌ಳನ್ನು (ನೀಲಿ ಡ್ರೆಸ್‌ನಲ್ಲಿರುವವಳು) ಯುವಕನೊಬ್ಬ ಪ್ರೀತಿಸುತ್ತಿರುತ್ತಾನೆ. ಆದರೆ ಆಕೆ ಅವನನ್ನು ಇಷ್ಟಪಟ್ಟಿರುವುದಿಲ್ಲ. ಈ ಮಧ್ಯೆ, ಆಕೆಯ ವಿವಾಹವನ್ನು ಬೇರೊಬ್ಬನ ಜತೆ ನಡೆಸಲು ಮನೆಯವರು ತೀರ್ಮಾನ ಮಾಡಿರುವುದು ಆ ಪ್ರಿಯಕರನಿಗೆ ಗೊತ್ತಾಗುತ್ತದೆ. ಮದುವೆಯ ಮುನ್ನಾದಿನ ಏಕಾಏಕಿ ಅವಳ ಮನೆಗೆ ನುಗ್ಗಿ ಆತ ಮನಬಂದಂತೆ ಗುಂಡು ಹಾರಿಸಿದ. ಘಟನೆಯಲ್ಲಿ ಆ ಹುಡುಗಿ ಮತ್ತು ಆಕೆಯ ತಂದೆ ಮೃತಪಟ್ಟಿದ್ದಾರೆ. ಈ ಘಟನೆ ಜೂನ್ 27ರಂದೇ ನಡೆದಿದ್ದು, ಅದರ ವಿಡಿಯೋ ಈಗ ಬಹಿರಂಗವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net