More

    ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮಗ್ಗುಲ ಮುಳ್ಳಾಗತೊಡಗಿವೆ ಚೀನಾ, ಪಾಕ್​

    ನವದೆಹಲಿ: ಚೀನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್​(ಸಿಪಿಇಸಿ) ಮೂಲಕ ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸುತ್ತಿರುವ ಚೀನಾ ಇತ್ತೀಚೆಗೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ ಪಾಲಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಚೀನಾಕ್ಕೆ ಗಿಲ್ಗಿಟ್​-ಬಾಲ್ಟಿಸ್ತಾನದ ಮೇಲೆ ಕಣ್ಣು. ಅದನ್ನು ವಶಪಡಿಸಿಕೊಳ್ಳು ಅದು ನಾನಾ ರೀತಿಯ ಕಸರತ್ತುಗಳನ್ನು ಆರಂಭಿಸಿದೆ.

    ಪರಿಣಾಮ, ಇಸ್ಲಾಮಾಬಾದ್​ನಲ್ಲಿ ಗಿಲ್ಗಿಟ್​- ಬಾಲ್ಟಿಸ್ತಾನ ವಿಚಾರವಾಗಿ ಇದುವರೆಗೆ ಮೂರು ಬಾರಿ ಸಭೆ ನಡೆದಿದೆ. ಪಾಕಿಸ್ತಾನದಲ್ಲಿ ಮೀಟಿಂಗ್ ನಡೆದಾಗೆಲ್ಲ ಚೀನಾ ಸೇನೆ ಲಡಾಕ್ ಭಾಗದಲ್ಲಿ ಅತಿಕ್ರಮಣದ ಪ್ರಯತ್ನಗಳಾಗಿವೆ. ಮೂಲಗಳ ಪ್ರಕಾರ, ಕಳೆದ ವರ್ಷ ಇಸ್ಲಾಮಾಬಾದ್​ನಲ್ಲಿ ಈ ಕುರಿತ ಮೊದಲ ಸಭೆ ನಡೆದಿತ್ತು. ಪಾಕಿಸ್ತಾನದ ಸೇನೆಯ ಉನ್ನತ ಅಧಿಕಾರಿಗಳೆಲ್ಲ ಅದರಲ್ಲಿ ಭಾಗವಹಿಸಿದ್ದರು. ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೂ ಆ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಆಹ್ವಾನವಿತ್ತು. ಗಿಲ್ಗಿಟ್ -ಬಾಲ್ಟಿಸ್ತಾನವನ್ನು ಪಾಕಿಸ್ತಾನದ ಜತೆಗೆ ವಿಲೀನಗೊಳಿಸುವ ವಿಚಾರವನ್ನೂ ಅಲ್ಲಿ ಚರ್ಚಿಸಲಾಗಿತ್ತು. ಆದರೆ ಈ ಪ್ರಸ್ತಾವನೆಯನ್ನು ಕಾಶ್ಮೀರಿ ಪ್ರತ್ಯೇಕತಾವಾದಿಗಳು ಒಪ್ಪಿಕೊಂಡಿರಲಿಲ್ಲ. ಇದು ಪಾಕಿಸ್ತಾನ ಸೇನೆ ಮತ್ತು ಐಎಸ್​ಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

    ಮೂರನೇ ಸಭೆ ಈ ವರ್ಷ ಫೆಬ್ರವರಿಯಲ್ಲಿ ನಡೆದಿದ್ದು, ಪಾಕ್​ ಸೇನೆಯ ಇನ್ನೊಬ್ಬ ಉನ್ನತಾಧಿಕಾರಿ ಅದರ ಅಧ್ಯಕ್ಷತೆ ವಹಿಸಿದ್ದ. ಈ ಸಭೆಯಲ್ಲಿ ಪಾಕಿಸ್ತಾನದ ಕಾನೂನು ಸಚಿವ, ಪಿಒಕೆಯ ಕಾನೂನು ಸಚಿವ, ಪಿಒಕೆಯ ಪ್ರಧಾನಿ, ಗಿಲ್ಗಿಟ್​ ಬಾಲ್ಟಿಸ್ತಾನದ ಮುಖ್ಯಮಂತ್ರಿ, ಹುರಿಯತ್ ಮತ್ತು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್​(ಜೆಕೆಎಲ್​ಎರ್ಫ್)ನ ಎರಡೂ ಬಣಗಳ ನಾಯಕರು ಭಾಗಿಯಾಗಿದ್ದರು.

    ಇದನ್ನೂ ಓದಿ: ಕರೊನಾ ಕುರಿತು ಚೀನಾ ಮಾಹಿತಿ ನೀಡಿಲ್ಲ – ಬದಲಾಯಿತು ಡಬ್ಲ್ಯುಎಚ್​ಒ ವರಸೆ

    ಈ ಸಭೆಯಲ್ಲಿ ಪಾಕಿಸ್ತಾನ ಸೇನೆಯು ಗಿಲ್ಗಿಟ್​-ಬಾಲ್ಟಿಸ್ತಾನದ ಇತಿಹಾಸದ ಚಿತ್ರಣ ನೀಡಿದ್ದು, ಅದು ಜಮ್ಮು-ಕಾಶ್ಮೀರದ ಭಾಗವೇ ಆಗಿರಲಿಲ್ಲ. ಅದನ್ನು ಬ್ರಿಟಿಷರು ಮತ್ತು ಡೋಗ್ರಾ ಮಹಾರಾಜ ಬಲವಂತವಾಗಿ ವಿಲೀನಮಾಡಿಕೊಂಡಿರುವುದು ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತ್ತು. ಹುರಿಯತ್ ನಾಯಕರು ಇದಕ್ಕೆ ಸಹಮತ ವ್ಯಕ್ತಪಡಿಸಿದರೂ, ಜೆಕೆಎಲ್​ಎಫ್​ ಮತ್ತು ಕಾಶ್ಮೀರದ ಎಸ್​ಎಎಸ್​ ಗಿಲಾನಿಯವರ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೊಂದು ಮಾಹಿತಿ ಪ್ರಕಾರ, ಗೀಲಾನಿಯ ಪ್ರತಿನಿಧಿಗಳು ಪಾಕ್ ಸೇನೆಯ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಶ್ರೀನಗರಕ್ಕೆ ಕರೆ ಮಾಡಿ ನಿಲುವು ಸ್ಪಷ್ಟಪಡಿಸುವಂತೆ ಮತ್ತು ಮುಂದಿನ ನಡೆಯ ಕುರಿತು ನಿರ್ದೇಶನ ನೀಡುವಂತೆ ಸೂಚಿಸಿದ್ದರು.

    ಗಿಲ್ಟಿಗ್-ಬಾಲ್ಟಿಸ್ತಾನದ ವಿಲೀನ ಪ್ರಕ್ರಿಯೆ ಕಾಶ್ಮೀರದಲ್ಲಿನ ಉಗ್ರ ಚಳವಳಿಗೆ ಕೆಡುಕು ಉಂಟುಮಾಡೀತು ಎಂದು ಗೀಲಾನಿ ಬಣದ ಪ್ರತಿನಿಧಿಗಳು ಆತಂಕ ಮತ್ತು ಕಳವಳ ವ್ಯಕ್ತಪಡಿಸಿ ಪಾಕ್​ ಸೇನೆಯ ಪ್ರಸ್ತಾವನೆಯನ್ನು ನಿರಾಕರಿಸಿದ್ದಾಗಿ ವರದಿಯಾಗಿದೆ. ಜೆಕೆಎಲ್​ಎಫ್​ ಪ್ರತಿನಿಧಿಗಳೂ ಸರಿಯಾದ ಅಭಿಪ್ರಾಯ ವ್ಯಕ್ತಪಡಿಸದ ಕಾರಣ ಸಭೆ ಫಲಿತಾಂಶವಿಲ್ಲದ ಕೊನೆಗೊಂಡಿದೆ. (ಏಜೆನ್ಸೀಸ್​)

    ಪಿಒಕೆ, ಗಿಲ್ಗಿಟ್​-ಬಾಲ್ಟಿಸ್ತಾನದ ಮೇಲಿದೆ ಚೀನಾ ಕಣ್ಣು: ಬದಲಾಗಿದೆ ಯುದ್ಧತಂತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts