

ಗುರುಪುರ: ವಾಮಂಜೂರು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ 2025-30ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ವಿನೋದಾ ಡಿ.ಅಂಚನ್ ಬೆಜ್ಜಿಬೆಟ್ಟು ಅವರು 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುನಂದಾ ಕೆ.ರೈ, ನಿರ್ದೇಶಕರಾಗಿ ರತಿ ಶೆಟ್ಟಿ, ಮೋಹಿನಿ ಗೌಡ, ವೀಣಾ ಶೆಟ್ಟಿ, ಕಮಲಾ ಗೌಡ, ಜಯಲಕ್ಷ್ಮೀ, ಪ್ರೇವಾ ಎಂ.ಶೆಟ್ಟಿ, ಜಯಂತಿ, ಪ್ರಮೀಳಾ ಶೆಟ್ಟಿ, ಪುಷ್ಪಾ, ವಿದ್ಯಾಲತಾ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಕಾವ್ಯಾ ಪಿ.ಕೆ. ಸಮ್ಮುಖದಲ್ಲಿ ಫೆ.14ರಂದು ಚುನಾವಣೆ ನಡೆದಿತ್ತು. ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ವಸಂತಿ ಸಹಕರಿಸಿದರು.