

ಗಂಗೊಳ್ಳಿ: ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ಚಿತ್ರದುರ್ಗದಲ್ಲಿ ಭಾನುವಾರ ರಾಜ್ಯಮಟ್ಟದ 19ನೇ ಅಬಾಕಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್‌ನ ವಿನೀಶ್ ಕುಮಾರ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಕಾವ್ರಾಡಿಯ ವಿಜಯಕುಮಾರ್ ಮತ್ತು ಶಿಕ್ಷಕಿ ಅನುಷಾ ಸಿ.ಬಂಗೇರ ದಂಪತಿ ಪುತ್ರ. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಅಬಾಕಸ್ ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕೆ.ಬಿ. ಮತ್ತು ಸುನೀತಾ ತರಬೇತಿ ನೀಡಿದ್ದಾರೆ.