

ಬೈಂದೂರು: ಉಡುಪಿ ಅಂಬೇಡ್ಕರ್ ಯುವ ಸೇನೆ ಬೈಂದೂರು ತಾಲೂಕು ಸಮಿತಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಬೈಂದೂರು ಘಟಕದ ಯುವ ಸೇನೆ ನೂತನ ಅಧ್ಯಕ್ಷರಾಗಿ ರಾಮ ಎಂ.ಮಯ್ಯಡಿ, ಉಪಾಧ್ಯಕ್ಷ ರಮೇಶ ಶಿರೂರು, ಕಾರ್ಯದರ್ಶಿ ಮಂಜುನಾಥ ಉಳ್ಳೂರು, ಖಜಾಂಚಿಯಾಗಿ ರಾಜೇಶ್ ಕೆರ್ಗಾಲ್ ಮತ್ತು ಸಮಿತಿ ಸದಸ್ಯರಿಗೆ ಜಿಲ್ಲಾ ನಿಕಟಪೂರ್ವಾಧ್ಯಕ್ಷ ಹರೀಶ್ ಸಾಲಿಯಾನ್ ಪ್ರಮಾಣ ವಚನ ಬೋಧಿಸಿದರು. ವಿಚಾರವಾದಿ ಡಾ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಯುವ ಸೇನೆ ಜಿಲ್ಲಾಧ್ಯಕ್ಷ ಗಣೇಶ ನೆರ್ಗಿ ಅಧ್ಯಕ್ಷತೆ ವಹಿಸಿದ್ದರು. ಯುವ ಸೇನೆ ಸಂಸ್ಥಾಪಕ ಜಯನ್ ಮಲ್ಪೆ ಪ್ರಾಸ್ತಾವಿಸಿದರು. ಅರುಣ್ ಹಕ್ಲಾಡಿ ಸ್ವಾಗತಿಸಿ, ರಾಜೇಶ ಕೇರ್ಗಾಲ್ ವಂದಿಸಿದರು. ರಾಘು ಶಿರೂರು ನಿರೂಪಿಸಿದರು