ಪ್ಯಾರೀಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮೂರು ಕಂಚು ಗೆದ್ದಿರುವ ಭಾರತಕ್ಕೆ ಪದಕದ ಬಣ್ಣ ಬದಲಾಗುವ ಕಾಲ ಬಂದಿದೆ. ಒಲಿಂಪಕ್ಸ್ನ ಕುಸ್ತಿ ಪಂದ್ಯದ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಭಾರತದ ವಿನೇಶ್ ಫೋಗಟ್ ಅವರು ಫೈನಲ್ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ತಲುಪಿದ ವಿನೇಶ್ ಫೋಗಟ್: ಕೇಂದ್ರಕ್ಕೆ ಟಾಂಗ್ ಕೊಟ್ಟ ಸಾಕ್ಷಿ, ಬಜರಂಗ್ ಪೂನಿಯ!
ಇಂದು (ಆ.06) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಕ್ಯೂಬಾದ ಗುಸ್ಮನ್ ಲೋಪೆಜ್ ಅವರನ್ನು 5-0 ರಿಂದ ಸೋಲಿಸಿದರರು. ಈ ಮೂಲಕ ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಸಾಧನೆ ಮಾಡಿದ್ದಾರೆ.
ಮಂಗಳವಾರ ಇದಕ್ಕೂ ಮೊದಲು ನಡೆದ ಪ್ರಿ ಕ್ವಾಟರ್ ಫೈನಲ್ನಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಒಲಂಪಿಕ್ ಚಿನ್ನದ ಪದಕ ವಿಜೇತ ಯುಯಿ ಸುಸಾಕಿ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಕ್ವಾಟರ್ ಫೈನಲ್ ಪಂದ್ಯದಲ್ಲೂ ಆಕ್ರಮಣ ಮುಂದುವರೆಸಿದ ವಿನೇಶ್ ಫೋಗಟ್ ಅವರು ಉಕ್ರೇನ್ನ ಒಕ್ಸಾನಾ ಲಿವೆಚ್ ವಿರುದ್ಧ ಗೆದ್ದು ಸೆಮಿಫೈನಲ್ಗೇರಿದರು.
2030ರಲ್ಲೂ ನಾವಿಲ್ಲೇ ಇರುತ್ತೇವೆ; ನೀವಲ್ಲೇ..ಇರುತ್ತಿರಿ ! ಸಂಸತ್ನಲ್ಲಿ ಪ್ರತಿಪಕ್ಷಗಳಿಗೆ ಜೋಶಿ ಟಾಂಗ್