ಸಿಎಂ ಬೊಮ್ಮಾಯಿಗೆ ಎದುರಾಳಿ ಆಗುತ್ತಾರಾ ವಿನಯ್ ಕುಲಕರ್ಣಿ?

vinay kulakarni
Published on

ಬೆಂಗಳೂರು: ಇದೀಗ ಮಾಜಿ ಸಚಿವ ವಿನಯ್ ಕುಲಕರ್ಣಿ, ಸ್ಪರ್ಧೆ ಎಲ್ಲಿಂದ ಎನ್ನುವ ಪ್ರಶ್ನೆ ಎದ್ದಿದ್ದು ಈ ಬಗ್ಗೆ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಈ ಸಂದರ್ಭ ವಿನಯ್​ ಕುಲಕರ್ಣಿ, "ಶಿಗ್ಗಾಂವಿ ಕ್ಷೇತ್ರದಿಂದ ಸ್ಫರ್ಧೆ ಮಾಡಲು ಸೂಚಿಸಿದ್ರೆ ನಿಲ್ಲುತ್ತೇನೆ. ನಮ್ಮ ನಾಯಕರು ಏನು ಹೇಳ್ತಾರೆ ಅದನ್ನು ಪಾಲನೆ ಮಾಡುತ್ತೇನೆ. ಈ ನಡೆ ಪಂಚಮಸಾಲಿ ಅಸ್ತ್ರ ಅಂತ ಅಲ್ಲ. ಬದಲಾಗಿ ಅಲ್ಲಿ ಸಾಕಷ್ಟು ಅಭಿವೃದ್ಧಿ ಆಗಬೇಕಿತ್ತು, ಆದರೆ ಆಗಿಲ್ಲ ಎಂದು. ಅಲ್ಲಿನ ಜನರು ಕೂಡ ಅಸಮಧಾನದಿಂದ ಇದ್ದಾರೆ. ನಾಯಕರು ಸೂಚನೆ ಕೊಟ್ಟರೆ ನಾನು ಶಿಗ್ಗಾಂವಿಯಿಂದ ಸ್ಪರ್ಧಿಸಲು ತಯಾರಿದ್ದೇನೆ" ಎಂದಿದ್ದಾರೆ.

ಇದೇ ವೇಳೆ, ಧಾರವಾಡ ಜಿಲ್ಲೆ ಪ್ರವೇಶಿಸುವ ಬಗ್ಗೆ ಪ್ರಶ್ನಿಸಿದಾಗ "ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಕೋರ್ಟ್​ಗೆ ಅರ್ಜಿ ಹಾಕಿದ್ದೇನೆ. ಪ್ರವೇಶ ಸಿಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಪ್ರವೇಶ ಸಿಗದೆ ಹೊದ್ರೆ ಬಾರ್ಡರ್ ನಲ್ಲಿ ಕೂತು ಚುನಾವಣೆ ಎದುರಿಸುತ್ತೇನೆ. 15ನೇ ತಾರೀಕಿನಂದು ನಾಮಪತ್ರ ಧಾರವಾಡದಲ್ಲಿ ಸಲ್ಲಿಸುತ್ತೇನೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net