ಆಪತ್ಕಾಲದಲ್ಲಿ ವಿಮೆ ರಕ್ಷಾ ಕವಚ : ತ್ರಿವೇಣಿ ಪಲ್ಲತ್ತಾರು ಹೇಳಿಕೆ

New Project (13)
Published on

ಪುತ್ತೂರು ಗ್ರಾಮಾಂತರ: ನಮ್ಮ ಬದುಕಿನಲ್ಲಿ ಎದುರಾಗುವ ನಷ್ಟ- ಗಂಡಾಂತರಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ವಿಮೆ ಮಾಡಿಸಿಕೊಳ್ಳುವುದು ಅಗತ್ಯ. ವಿಮೆ ಆಪತ್ಕಾಲದಲ್ಲಿ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ನಾವು ವಿಮೆ ಮಾಡಿಸಿಕೊಳ್ಳುವ ಜತೆಗೆ ಕುಟುಂಬದವರನ್ನು ವಿಮೆಗೆ ಒಳಪಡಿಸುವುದು ಅಗತ್ಯ ಎಂದು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.

ಕುಂಬ್ರದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕುಂಬ್ರ ಶಾಖೆ ವತಿಯಿಂದ ಆಯೋಜಿಸಲಾದ ಜನ ಸುರಕ್ಷಾ ಯೋಜನೆಗಳ ಸಂಪೂರ್ಣ ಅಭಿಯಾನ, ಗ್ರಾಪಂ ಮಟ್ಟದ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಸಂಪನ್ಮೂಲ ವ್ಯಕ್ತಿ ಅಮೂಲ್ಯ ಆರ್ಥಿಕ ಸಾಕ್ಷಾರತಾ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ಮಾತನಾಡಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕುಂಬ್ರ ಶಾಖೆ ಸಿಬ್ಬಂದಿ ಕಿಶೋರ್ ಕುಮಾರ್ ಬ್ಯಾಂಕ್‌ನಿಂದ ಗ್ರಾಹಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್. ಅತಿಥಿಯಾಗಿದ್ದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕುಂಬ್ರ ಶಾಖೆ ಮ್ಯಾನೇಜರ್ ವಿಶ್ವನಾಥ ಎಸ್. ಸ್ವಾಗತಿಸಿದರು. ಭಾರತೀಯ ಜೀವ ವಿಮಾ ನಿಗಮದ ಮುಖ್ಯ ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಸಿಬ್ಬಂದಿ ಅನಿಲ್ ಕುಮಾರ್ ರೈ, ನವೋದಯ ಪ್ರೇರಕಿಯರಾದ ಹರಿಣಾಕ್ಷಿ, ಕಲ್ಪವಲ್ಲಿ, ಗ್ರಾಹಕ ರಾಜೇಶ್ ರೈ ಪರ್ಪುಂಜ, ಪದ್ಮನಾಭ ಆಚಾರ್ಯ, ಧರ್ಣಪ್ಪ ಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net