

ಕುಂದಾಪುರ: ಕೆಲ ತಿಂಗಳ ಹಿಂದಷ್ಟೇ ಧರಣಿ, ಸತ್ಯಾಗ್ರಹ ನಡೆಸಿ ಸರಕಾರದಿಂದ ಭರವಸೆ ಪಡೆದು ಮುಷ್ಕರ ಕೈಬಿಟ್ಟಿದ್ದ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರದಿಂದ ಮತ್ತೆ ಧರಣಿ ಆರಂಭಿಸಿದ್ದಾರೆ.
ಕುಂದಾಪುರದ ಮಿನಿ ವಿಧಾನಸೌಧದ ಎದುರು ಕುಂದಾಪುರ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂ ವತಿಯಿಂದ ನಡೆದ ಮುಷ್ಕರದಲ್ಲಿ 36 ಮಂದಿ ಭಾಗವಹಿಸಿದ್ದರು.
ತಾಲೂಕು ಸಂ ಅಧ್ಯಕ್ಷ ಪ್ರಕಾಶ್ ರಾಥೋಡ್ ಮಾತನಾಡಿ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂ ವತಿಯಿಂದ ಕಳೆದ ವರ್ಷ ರಾಜ್ಯಾದ್ಯಂತ ಮುಷ್ಕರ ನಡೆಸಲಾಗಿತ್ತು. ಸರಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬೆನ್ನಲ್ಲೇ ರಾಜ್ಯವ್ಯಾಪಿ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಆ ಬಳಿಕ ಬೇಡಿಕೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಅನಿರ್ದಿಷ್ಟಾವಧಿಗೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ವಾನಿಸಲಾಗಿದೆ ಎಂದರು.
ತಾಲೂಕು ಸಂಘ ಉಪಾಧ್ಯಕ್ಷ ಆನಂದ ಕುವಾರ್, ಕಾರ್ಯದರ್ಶಿ ವಿಶ್ವನಾಥ, ರಾಜ್ಯ ಸಂ ವಾಧ್ಯಮ ವಕ್ತಾರ ಆನಂದ್, ಜಿಲ್ಲಾ ಉಪಾಧ್ಯಕ್ಷ ಶಿವರಾಯ್, ಉಪಾಧ್ಯಕ್ಷೆ ದೀಪಿಕಾ ಶೆಡ್ತಿ ಮೊದಲಾದವರಿದ್ದರು.