ವಿಜಯವಾಣಿ ಸುದ್ದಿಜಾಲ ಕುಂದಾಪುರ
ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಪದ್ಧತಿಯ ಮೀನುಗಾರರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿದಂತಾಗಿದ್ದು, ಪರಿಶಿಷ್ಟ ಜಾತಿ ಮೀನುಗಾರರನ್ನು ಚುನಾವಣೆಯಿಂದ ದೂರ ಇಟ್ಟು ಮೀಸಲು ಸ್ಥಾನಕ್ಕೆ ಮತದಾನ ಮಾಡುತ್ತಿರುವ ಕಾರಣ ಅಸ್ಪಶ್ಯತೆ ನಿವಾರಣೆ ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಗರ್ಜನೆ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಆಗ್ರಹಿಸಿದರು.
ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಎ ದರ್ಜೆ ಸದಸ್ಯತ್ವ ನೀಡಲು ನಿರಾಕರಿಸಿದ್ದು, ಇದನ್ನು ವಿರೋಧಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನುಗಾರರ ಒಕ್ಕೂಟದಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಜತೆ ಮಾತುಕತೆ ನಡೆಸಿದ್ದು, ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಜಗದೀಶ್ ಗಂಗೊಳ್ಳಿ, ವಕೀಲ ಆನಂದ ಗಂಗೊಳ್ಳಿ, ಯುವಸೇನಾ ಅಧ್ಯಕ್ಷ ಗಣೇಶ್ ನಗ್ರಿ, ಹರೀಶ್ ಮಲ್ಪೆ, ಮಂಜುನಾಥ ಗುಡ್ಡೆಯಂಗಡಿ, ವಿಜಯ್ ಕೆ.ಎಸ್, ಚಂದ್ರಮ ತಲ್ಲೂರು, ರಾಘವೇಂದ್ರ ಬಾವಿಕಟ್ಟೆ, ಸಂದೇಶ್, ಜಿ. ಪದ್ಮಾವತಿ, ಜಿ.ಟಿ.ವರದಾ, ನಾಗಿಣಿ ಮೊದಲಾದವರು ಇದ್ದರು.