ವಿಜಯವಾಣಿ ವರದಿ ಪ್ರತಿಧ್ವನಿ: ಮುದ್ರಾಂಕ ಶುಲ್ಕದ ಭಾರ ಇಳಿಸಲು ರುದ್ರಗೌಡ ಒತ್ತಾಯ

Mudranka Shulka
Published on

ಬೆಂಗಳೂರು: ಮುಚ್ಚಳಿಕೆ, ಜಮೀನು ಖರೀದಿ ಮತ್ತಿತರ ವ್ಯವಹಾರಗಳಿಗೆ ಮುದ್ರಾಂಕ ಶುಲ್ಕ ಹೆಚ್ಚಿಸಿರುವ ಸರ್ಕಾರ, ರೈತರ ಮೇಲೆ ದೊಡ್ಡ ಭಾರ ಹೊರಿಸಿದೆ ಎಂದು ವಿಧಾನ ಪರಿಷತ್​ನಲ್ಲಿ ಬಿಜೆಪಿಯ ರುದ್ರಗೌಡ ಕಳವಳ ವ್ಯಕ್ತಪಡಿಸಿದರು.

‘ರೈತರಿಗೆ ಹೊರೆಯಾದ ಮುದ್ರಾಂಕ ಶುಲ್ಕ’ ಶೀರ್ಷಿಕೆಯಡಿ ವಿಜಯವಾಣಿ ಪ್ರಕಟಿಸಿದ ವರದಿಯನ್ನು ವಿಧಾನ ಪರಿಷತ್​ನಲ್ಲಿ ಶೂನ್ಯ ವೇಳೆಯಲ್ಲಿ ಸೋಮವಾರ ಪ್ರಸ್ತಾಪಿಸಿದ ಅವರು, ಮುಚ್ಚಳಿಕೆ, ಅಫಿಡವಿಟ್​ಗೆ ಈ ಮೊದಲು 20 ರೂ. ಶುಲ್ಕವಿದ್ದದ್ದು ಈಗ 100 ರೂ.ಗೆ ಹೆಚ್ಚಿಸಿದ್ದು, ರೈತರ ಜತೆಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಜಮೀನು ವಹಿವಾಟಿಗೆ ಸಂಬಂಧಿತ ಮುದ್ರಾಂಕ ಶುಲ್ಕವನ್ನೂ ಏರಿಸಲಾಗಿದೆ. ಬರಗಾಲದಲ್ಲಿ ಈ ನಿರ್ಧಾರ ಸರಿಯಾ ದುದಲ್ಲ. ಮುದ್ರಾಂಕ ಶುಲ್ಕ ವಿಚಾರದಲ್ಲಿ ರೈತರಿಗೆ ಪ್ರತ್ಯೇಕ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹೇಳಿದರು.

ಅಲ್ಲದೆ, ಶುಲ್ಕದ ಹೊರೆ ಇಳಿಸಬೇಕು ಎಂದು ರುದ್ರಗೌಡ ಮನವಿ ಮಾಡಿದಾಗ ಸಂಬಂಧಿಸಿದ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net