More

    ದಿನಕ್ಕೆ 2 ಲಕ್ಷ ರೂ. ಸಂಪಾದಿಸುವ ರೋಲ್ಸ್ ರಾಯ್ಸ್ ಕಾರಿಗೆ ಬಿತ್ತು 12 ಲಕ್ಷ ರೂ. ದಂಡ! ಕಾರಣ ಹುಬ್ಬೇರಿಸುವಂತಿದೆ

    ತಿರುವನಂತಪುರಂ: ಪಾಂಡಿಚೇರಿಯಲ್ಲಿ ನಕಲಿ ವಿಳಾಸ ಕೊಟ್ಟು ನೋಂದಣಿ ಮಾಡಿ, ಕೇರಳದಲ್ಲಿ ತೆರಿಗೆ ಪಾವತಿಸದೆ ಬಾಡಿಗೆಗೆ ಬಿಡಲಾಗಿದ್ದ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಸೀಜ್​ ಮಾಡಿರುವ ಮೋಟಾರು ವಾಹನ ಇಲಾಖೆ ಅಧಿಕಾರಿಗಳು, ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

    ಕಾರಿನ ಮೌಲ್ಯ ಬರೋಬ್ಬರಿ 3 ಕೋಟಿ ರೂಪಾಯಿ. ಮದುವೆಯ ಚಿತ್ರೀಕರಣಕ್ಕಾಗಿ ತಂದಿದ್ದ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾರನ್ನು ಬಾಡಿಗೆಗೆ ಪಡೆದ ಜನರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಎರ್ನಾಕುಲಂ ಮೂಲದ ಕಾರಿನ ಮಾಲೀಕರ ವಿರುದ್ಧ ಮೋಟಾರು ವಾಹನ ಇಲಾಖೆ ಕ್ರಮ ಕೈಗೊಂಡಿದೆ.

    ಮಾಲೀಕರಿಗೆ 12,04,000 ರೂ. ದಂಡ ವಿಧಿಸಲಾಗಿದೆ. ಮಲಪ್ಪುರಂ ಜಿಲ್ಲಾ ಜಾರಿ ಕೊಟ್ಟಕ್ಕಲ್ ಕಂಟ್ರೋಲ್ ರೂಂ ಅಧಿಕಾರಿಗಳು ಕಾರನ್ನು ಪತ್ತೆ ಹಚ್ಚಿ, ಹಲವು ದಿನಗಳ ಕಾಲ ನಿಗಾವಹಿಸಿ, ಇದೀಗ ಕಾನೂನು ಕ್ರಮ ಕೈಗೊಂಡಿದ್ದಾರೆ. ಎರ್ನಾಕುಲಂನ ಟ್ರಾವೆಲ್ ಏಜೆನ್ಸಿಯೊಂದು ಈ ಕಾರನ್ನು ದಿನಕ್ಕೆ 2 ಲಕ್ಷ ರೂಪಾಯಿಗೆ ಬಾಡಿಗೆಗೆ ನೀಡುತ್ತಿತ್ತು. ಮಲಪ್ಪುರಂನಲ್ಲಿ ವಾಹನ ತಪಾಸಣೆ ವೇಳೆ ವಂಚನೆ ಬೆಳಕಿಗೆ ಬಂದಿದೆ.

    ಇತ್ತೀಚೆಗಷ್ಟೇ ವಾಹನ ತಪಾಸಣೆ ವೇಳೆ ವಿವಾಹಿತ ದಂಪತಿ ಕಾರಿನಲ್ಲಿದ್ದರು. ಎರ್ನಾಕುಲಂನಿಂದ ಕಾರನ್ನು ಬಾಡಿಗೆಗೆ ಪಡೆದಿರುವುದಾಗಿ ಅವರು ಹೇಳಿದರು. ದುಬಾರಿ ಕಾರು ಆಗಿದ್ದರಿಂದ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಲಕ್ಷಗಟ್ಟಲೆ ಚಿನ್ನಾಭರಣ ಧರಿಸಿದ್ದ ನವದಂಪತಿಯ ಭದ್ರತೆಯೂ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ಮೊದಲು ಮಾಹಿತಿ ಸಂಗ್ರಹಿಸಿ ಕಾರನ್ನು ಬಿಡುಗಡೆ ಮಾಡಿದ ಅಧಿಕಾರಿಗಳು ನಂತರ ಕಾರು ಎರ್ನಾಕುಲಂ ತಲುಪಿದ ಬಳಿಕ ಕಾನೂನು ಕ್ರಮ ಕೈಗೊಂಡಿದ್ದಾರೆ.

    ಎಂವಿಐಎಸ್ ಪಿಕೆ ಮನೋಹರನ್, ಎಂ ಸಲೀಷ್, ಪಿ ಅಜೀಶ್ ಮತ್ತು ವಿ ರಾಜೇಶ್ ಕೂಡ ಮೋಟಾರು ವಾಹನ ಇಲಾಖೆ ತಂಡದ ಭಾಗವಾಗಿದ್ದರು. (ಏಜೆನ್ಸೀಸ್​)

    ನೀನು ಯಾವ… ನಟ ದರ್ಶನ್ ಆಡಿದ ಆ ಒಂದು ಮಾತಿಗೆ​ ಕೆರಳಿ ಕೆಂಡವಾದ ಅಹೋರಾತ್ರ, ಅಶ್ಲೀಲ ಪದ ಬಳಕೆ

    ವಿಶ್ವದ ಅತಿದೊಡ್ಡ ಹಾವು ಹಸಿರು ಅನಕೊಂಡದ ಹೊಸ ಪ್ರಭೇದ ಕಂಡು ಅಚ್ಚರಿಗೀಡಾದ ಸಂಶೋಧಕರು!

    ಇವಿಎಂ-ವಿವಿಪ್ಯಾಟ್ ಬಳಸಬಹುದು: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts