ಜನಿಸಿದ ಮರುಕ್ಷಣವೇ ತಾಯಿಯನ್ನೇ ತಿಂದುಹಾಕುತ್ತೆ ಈ ಡೇಂಜರೆಸ್​ ಜೀವಿ! ಇಲ್ಲಿದೆ ನೋಡಿ ನಿಮ್ಮನ್ನು ಬೆರಗಾಗಿಸುವ ಸಂಗತಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ
  • ವಿಸ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಕಡಲ ಆಳದಷ್ಟಿದೆ
  • ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟು ವಿಚಿತ್ರ ಅಂದರೆ ನಿಜಕ್ಕೂ ನಂಬುವುದಕ್ಕೆ ಅಸಾಧ್ಯ
Unknown Facts: ಈ ಭೂಮಂಡಲದಲ್ಲಿ ಲೆಕ್ಕವಿಲ್ಲದಷ್ಟು ನಿಗೂಢತೆ ಅಡಗಿದೆ. ಅವುಗಳಿಂದಲೇ ಭೂಮಿ ಕೂಡಿರುವುದು ಹೊಸ ವಿಷಯವೇನಲ್ಲ ಬಿಡಿ. ವಿಸ್ಮಯಕಾರಿ ಲೋಕದ ಬಗ್ಗೆ ಮಾನವ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದ ಆಳದಷ್ಟಿದೆ. ಆದರೆ, ತಿಳಿದಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ಒಂದು ನಿಮಷ ನಾವೇ ಬೆರಗಾಗುತ್ತೀವಿ. ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟು ವಿಚಿತ್ರವಾಗಿರುತ್ತವೆ ಎಂದರೆ, ನಿಜಕ್ಕೂ ಇವುಗಳ ಸ್ವಭಾವವೇ ಹೀಗಾ? ಎನ್ನುವಂತೆ ಮಾಡುತ್ತದೆ.
ಇದೀಗ ಅಂಥದ್ದೇ ಜೀವಿಯೊಂದರ ಬಗ್ಗೆ ಇಲ್ಲಿದೆ ನೋಡಿ ಬಹುತೇಕರಿಗೆ ಗೊತ್ತಿರದ ಹುಬ್ಬೇರಿಸುವ ಮಾಹಿತಿ. ಜನಿಸಿದ ತಕ್ಷಣ ತನ್ನ ತಾಯಿಯನ್ನೇ ತಿನ್ನುವ ಪ್ರಾಣಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಬಹುಶಃ ಕೆಲವರಿಗೆ ಸಿಂಹ, ಚಿರತೆ, ಹುಲಿ ಹಾಗೂ ಘೇಂಡಾಮೃಗಗಳಂತಹ ಪ್ರಾಣಿಗಳು ನೆನಪಿಗೆ ಬರಬಹುದು. ಇನ್ನು ಕೆಲವರು ಆ ರೀತಿಯ ಜೀವಿ ಇದೋದಕ್ಕೆ ಸಾಧ್ಯವಿಲ್ಲ ಎನ್ನಬಹುದು. ಆದರೆ, ಈ ಲೇಖನ ಓದಿದ ಬಳಿಕ ನೀವು ಆಶ್ಚರ್ಯ ಪಡುವುದಂತೂ ಖಚಿತ. ಅದೊಂದು ಚಿಕ್ಕ ಪ್ರಾಣಿ. ಮನೆಗಳಲ್ಲಿ ಮತ್ತು ಹೊಲಗಳಲ್ಲಿ ಸಣ್ಣ ರಂಧ್ರಗಳಲ್ಲಿ ಬಹುತೇಕರು ನೋಡಿರುತ್ತಾರೆ.
ಅಷ್ಟಕ್ಕೂ ಅದು ಯಾವ ಜೀವಿ ಎಂದು ನೋಡುವುದಾದರೆ, ಅದುವೇ ಹೆಣ್ಣು ಚೇಳು. ವಿಷ ಜಂತುಗಳ ಪಟ್ಟಿ ಸಿದ್ಧಪಡಿಸಿದರೆ ಅದರಲ್ಲಿ ಚೇಳುಗಳಿಗೂ ಸ್ಥಾನ ಫಿಕ್ಸ್​. ಒಂದು ಚೇಳು 2 ಮಿಲಿಗ್ರಾಂ ವಿಷವನ್ನು ಹೊಂದಿರುತ್ತದೆ. ಚೇಳುಗಳ ಕೊಂಡಿಯಲ್ಲಿ ಮಾರ್ಕಾಟಾಕ್ಸಿನ್ ಎಂಬ ವಿಷವಿದೆ. ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಈ ವಿಷವನ್ನು ಹೊರತೆಗೆಯುತ್ತಾರೆ. ರಕ್ತನಾಳಗಳಲ್ಲಿ ಹೊಸ ರಕ್ತ ಕಣಗಳ ರಚನೆಗೆ ಮತ್ತು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ವಿಷ ಸಹ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಒಂದು ಹೆಣ್ಣು ಚೇಳು ಒಂದೇ ಸಮಯದಲ್ಲಿ ಹಲವಾರು ಮರಿಗಳಿಗೆ ಜನ್ಮ ನೀಡುತ್ತದೆ. ಅವುಗಳನ್ನು ರಕ್ಷಿಸಲು ತಾಯಿ ಚೇಳು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತದೆ. ಮರಿಗಳನ್ನು ಹೊತ್ತೊಯ್ಯುವಾಗ, ಎಳೆಯ ಚೇಳುಗಳು ತಾಯಿಯ ಮಾಂಸವನ್ನು ತಿನ್ನುತ್ತವೆ. ತಾಯಿ ಚೇಳಿನ ದೇಹವು ಟೊಳ್ಳಾಗುವವರೆಗೆ ಮತ್ತು ಸಾಯುವವರೆಗೂ ಮಾಂಸವನ್ನು ಕಿತ್ತು ತಿನ್ನುತ್ತವೆ,(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net