More

    ವಿಜಯ್ ರಾಘವೇಂದ್ರ ಈಗ ರಾಘು; ವಿಭಿನ್ನ ಥ್ರಿಲ್ಲರ್​ನಲ್ಲಿ ಹೊಸ ತರಹದ ಪಾತ್ರ

    ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸಿದ ಚಿತ್ರಗಳನ್ನು ನಿರ್ದೇಶಿಸಿದ್ದು ಹೊಸಬರು. ಬರೀ ಹೊಸ ನಿರ್ದೇಶಕರಷ್ಟೇ ಅಲ್ಲ, ಹೊಸ ತಂಡದೊಂದಿಗೆ ವಿಜಯ್ ರಾಘವೇಂದ್ರ ಹೆಚ್ಚುಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ‘ರಾಘು’. ಈ ಚಿತ್ರದ ಫಸ್ಟ್​ಲುಕ್ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ಅಧಿಕೃತವಾಗಿ ಬಿಡುಗಡೆಯಾಗಿದೆ.

    ‘ರಾಘು’ ಒಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಚಿತ್ರದ ಮೂಲಕ ಆನಂದರಾಜ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ಅವರು, ‘ಇದೊಂದು ವಿಭಿನ್ನ ಥ್ರಿಲ್ಲರ್ ಆಗಿದ್ದು, ವಿಜಯ್ ರಾಘವೇಂದ್ರ ಅವರ ಕೆರಿಯರ್​ನಲ್ಲಿ ಇಷ್ಟೊಂದು ರಕ್ತಪಾತ ಇರುವ ಯಾವುದೇ ಚಿತ್ರವೊಂದು ಬಂದಿಲ್ಲ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಇದು ಅವರ 56ನೇ ಚಿತ್ರವಾಗಿದ್ದು, ಯಾವೊಂದು ಚಿತ್ರದಲ್ಲೂ ಈ ತರಹದ ಪಾತ್ರವನ್ನು ಅವರು ಮಾಡಿರಲಿಲ್ಲ’ ಎನ್ನುತ್ತಾರೆ ಆನಂದರಾಜ್. ‘ರಾಘು’ ಚಿತ್ರಕ್ಕೆ ಮೇ 5ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ಮಂಡ್ಯ ಮುಂತಾದ ಕಡೆ ಚಿತ್ರೀಕರಣ ನಡೆಯಲಿದ್ದು, ಚಿತ್ರಕ್ಕಾಗಿ ಎರಡು ವಿಶೇಷ ಸೆಟ್​ಗಳನ್ನು ನಿರ್ವಿುಸಲಾಗುತ್ತದಂತೆ. ರಣ್ವಿತ್ ಶಿವಕುಮಾರ್ ಮತ್ತು ಅಭಿಷೇಕ್ ಕೋಟ ಜತೆಯಾಗಿ ನಿರ್ವಿುಸುತ್ತಿರುವ ಈ ಚಿತ್ರಕ್ಕೆ, ಉದಯ್ ಲೀಲಾ ಛಾಯಾಗ್ರಹಣ ಮತ್ತು ಸೂರಜ್ ಜೋಯಿಸ್ ಸಂಗೀತವಿದೆ.

    ಮಸೀದಿಗಳಲ್ಲಿನ ಮೈಕ್​ ವಿರುದ್ಧ ಶ್ರೀರಾಮಸೇನೆ ಗುಡುಗು; ನಿರ್ಬಂಧಿಸದಿದ್ದರೆ ದೇವಸ್ಥಾನಗಳಲ್ಲಿ ಮೈಕ್​ ಹಾಕಿ ಭಜನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts