

ವಿಜಯಪುರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಕೆಲವು ಕಡೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ತೆರಳಲು ಹರಸಾಹಸ ನಡೆಸಬೇಕಾಗಿ ಬಂತು. ಮುದ್ದೇಬಿಹಾಳ ತಾಲ್ಲೂಕಿನ ಚವನಬಾವಿ ಹಾಗೂ ನಾಲತವಾಡ ಸಂಪರ್ಕಿಸುವ ರಸ್ತೆಯ ಸೇತುವೆ ಮೇಲೆಯೇ ಹಳ್ಳದ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ವಿದ್ಯಾರ್ಥಿಗಳು ಭಾರಿ ತೊಂದರೆ ಅನುಭವಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹೋಗಲು ಜೀವ ಅಂಗೈಯಲ್ಲಿ ಹಿಡಿದು ಹಳ್ಳದ ಪ್ರವಾಹದ ನೀರನ್ನು ವಿದ್ಯಾರ್ಥಿಗಳು ದಾಟಿ ಮುನ್ನಡೆದರು. ನಾಗರಬೆಟ್ಟದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಅವರು ಹಾಜರಾಗಬೇಕಾಗಿತ್ತು. ರಾತ್ರಿ ಭಾರೀ ಮಳೆ ಆಗಿರುವ ಕಾರಣ ಹಳ್ಳದಲ್ಲಿ ಪ್ರವಾಹ ಉಂಟಾಗಿದ್ದು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳನ್ನು ಕೈ ಹಿಡಿದು ಗ್ರಾಮಸ್ಥರು ದಾಟಿಸಿದ ದೃಶ್ಯ ಕಂಡುಬಂತು.
ಇದನ್ನೂ ಓದಿ: ನಮ್ಮ ಬೇರುಗಳೇ ಶಾಶ್ವತ…
ಇಲ್ಲಿ ಸೇತುವೆ ನಿರ್ಮಿಸಕೊಡಬೇಕು ಎಂಬ ಗ್ರಾಮಸ್ಥರ ಒತ್ತಾಯ, ಆಗ್ರಹಕ್ಕೆ ಈಗ ಸಮಸ್ಯೆ ಏನೆಂಬುದನ್ನು ಪ್ರಕೃತಿಯೇ ಸರ್ಕಾರಕ್ಕೆ ತೋರಿಸಿಕೊಟ್ಟಿದೆ. ಸ್ಥಳೀಯಾಡಳಿತ ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.