'ವಿಜಯಾನಂದ' ಚಿತ್ರಕ್ಕೆ ಬೆಂಗಳೂರಲ್ಲಿ ಸಿಕ್ತು ಭರ್ಜರಿ ಓಪನಿಂಗ್​

Vijayananda Theater 2
Published on

ಬೆಂಗಳೂರು: ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ 'ವಿಜಯಾನಂದ' ಚಿತ್ರಕ್ಕೆ ಶುಕ್ರವಾರ ಭರ್ಜರಿ ಓಪನಿಂಗ್​ ಸಿಕ್ಕಿದೆ.

ಬೆಂಗಳೂರಿನಲ್ಲಿ ಸಂತೋಷ್​ ಮತ್ತಿತರ ಚಿತ್ರಮಂದಿರಗಳಲ್ಲಿ ಚಿತ್ರವು ಬಿಡುಗಡೆಯಾಗಿದ್ದು, ಎಲ್ಲ ಚಿತ್ರಮಂದಿರಗಳಲ್ಲೂ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ 10.30ಕ್ಕೆ ಚಿತ್ರದ ಮೊದಲ ಪ್ರದರ್ಶನ ಆಯೋಜಿತವಾಗಿದ್ದು, ಬೆಳಿಗ್ಗಿನಿಂದಲೇ ಜನ ಚಿತ್ರಮಂದಿರಗಳ ಎದುರು ಕಿಕ್ಕಿರಿದಿದ್ದು ಕಂಡು ಬಂತು.

ಪ್ರಮುಖ ಚಿತ್ರಮಂದಿರವಾದ ಸಂತೋಷ್ ಚಿತ್ರಮಂದಿರದ ಎದುರು ಡೊಳ್ಳು ಕುಣಿತ ಭರಾಟೆ ಜೋರಾಗಿತ್ತು. ಇನ್ನು, ಚಿತ್ರಮಂದಿರಕ್ಕೆ ಭೇಟಿ ನೀಡಿದ ಚಿತ್ರತಂಡಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.

ಇನ್ನು, ಪ್ರಸನ್ನ ಚಿತ್ರಮಂದಿರದಲ್ಲಿ 'ವಿಜಯಾನಂದ' ಚಿತ್ರವನ್ನು ಬರಮಾಡಿಕೊಳ್ಳುವುದಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಬಂದಿದ್ದರು. ಚಿತ್ರಮಂದಿರದ ಎದುರು ವಿ.ಆರ್​.ಎಲ್ ಸಮೂಹ ಸಂಸ್ಥೆಯ ಮಾಲೀಕರ ಕಟೌಟ್ಸ್ ನಿಲ್ಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net