More

    ಹುಬ್ಬಳ್ಳಿಯ PVRನಲ್ಲಿ ವಿಜಯಾನಂದ ಸಿನಿಮಾ ವೀಕ್ಷಿಸಿದ ಗಣ್ಯರು: ವಿಜಯ ಸಂಕೇಶ್ವರರಿಗೆ ಸನ್ಮಾನ

    ಹುಬ್ಬಳ್ಳಿ: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ಇಂದಿನಿಂದ ಬಿಡುಗಡೆಯಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಪಿವಿಆರ್​, ಅಪ್ಸರಾ ಹಾಗೂ ಸಿನಿಪೊಲೀಸ್ ಚಿತ್ರಮಂದಿರದಲ್ಲಿ ವಿಜಯಾನಂದ ಅದ್ಧೂರಿಯಾಗಿ ತೆರೆಕಂಡಿದೆ. ಪಿವಿಆರ್ ಸಿನಿಮಾದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಹಾಗೂ ಉದ್ಯಮಿಗಳಿಂದ ಶುಕ್ರವಾರ ಬೆಳಗ್ಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.

    ಚಲನಚಿತ್ರ ಪ್ರದರ್ಶನದ ಮುಂಚೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಮತ್ತಿತರರು ಡಾ. ವಿಜಯ ಸಂಕೇಶ್ವರ ಅವರನ್ನು ಸನ್ಮಾನಿಸಿ, ಶುಭಾಶಯ ಕೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿಜಯ ಸಂಕೇಶ್ವರ, ನನ್ನ ಜೀವನದಲ್ಲಿ ಏರಿಳತಗಳು ಬಂದಾಗ ಲಕ್ಷಾಂತರ ಜನರು ಬೆನ್ನಿಗೆ ನಿಂತು ಸಹಾಯ ಮಾಡಿದ್ದಾರೆ. ಸಾವಿರಾರು ಜನರ ಆಶೀರ್ವಾದ ನನ್ನ ಮೇಲಿದೆ. ನನ್ನ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆಯುತ್ತಿದ್ದೇನೆ. ಅದೇ ರೀತಿ ನಾನು ಹಾಕಿಕೊಟ್ಟ ಮಾರ್ಗದಲ್ಲಿ ನನ್ನ ಮಗ ಹಾಗೂ ಮೊಮ್ಮಗ ನಡೆಯುತ್ತಿದ್ದಾರೆ. ನನಗೆ ಸಿಕ್ಕಿರುವ ಗೌರವದಲ್ಲಿ ನನ್ನ ಇಪ್ಪತ್ತು ಸಾವಿರ ಸಿಬ್ಬಂದಿಯ ಪಾಲೂ ಇದೆ. ನನ್ನ ಯಶಸ್ಸಿನ ಹಿಂದೆ ಧರ್ಮಪತ್ನಿಯ ಸಹಕಾರವೂ ಇದೆ ಎಂದರು.

    ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ನಿರ್ವಿುಸಿರುವ ‘ವಿಜಯಾನಂದ’ ಚಿತ್ರಕ್ಕೆ ‘ಟ್ರಂಕ್’ ಖ್ಯಾತಿಯ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ. ಈಗಾಗಲೇ ಚಿತ್ರತಂಡ ದೆಹಲಿ, ಮುಂಬೈ, ಅಹ್ಮದಾಬಾದ್, ಲಖನೌ, ಇಂದೋರ್, ಚೆನ್ನೈ, ಕೊಚ್ಚಿ, ಹೈದರಾಬಾದ್ ಸೇರಿದಂತೆ ಹಲವೆಡೆ ಪ್ರಚಾರ ಮಾಡಿದ್ದು, ದೇಶದ ಮೂಲೆಮೂಲೆಗಳಿಗೂ 32 ಟ್ಯಾಬ್ಲೋಗಳು ಸಂಚರಿಸಿವೆ.

    ಯುವ ಮನಸ್ಸುಗಳಿಗೆ ವಿಜಯಾನಂದ ಸಿನಿಮಾ ಸ್ಫೂರ್ತಿ ನೀಡುವುದಂತೂ ಖಂಡಿತ: ನಟಿ ಆಶಿಕಾ ರಂಗನಾಥ್​

    ಯುವಕರಿಗೆ ಸ್ಫೂರ್ತಿಯಾಗಿದ್ದ ಐಪಿಎಸ್​ ಅಧಿಕಾರಿ ಅಮಿತ್​ ಲೋಧಾ ವಿರುದ್ಧ ಭ್ರಷ್ಟಾಚಾರ ಆರೋಪ: FIR ದಾಖಲು

    ‘ಸಿರಿ’ ಸಂಭ್ರಮದ ವಿಜಯಾನಂದ; ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts