'ದುಡ್ಡಿಲ್ಲ, ಭಾರತದ ನನ್ನ ವಕೀಲರಿಗೆ ಪಾವತಿಸೋಕೆ ಹಣ ಕೊಡಿ' ಲಂಡನ್​ ಕೋರ್ಟ್​ಗೆ ವಿಜಯ್​ ಮಲ್ಯ ಮನವಿ

vijay malya
Published on

ಲಂಡನ್​: ಭಾರತದಿಂದ ಪರಾರಿಯಾಗಿ ಲಂಡನ್​ನಲ್ಲಿ ಕುಳಿತಿರುವ ವಿಜಯ್​ ಮಲ್ಯ ಇದೀಗ ಲಂಡನ್​ ನ್ಯಾಯಾಲಯದ ಮುಂದೆ ಹೊಸ ಬೇಡಿಕೆಯನ್ನಿಟ್ಟಿದ್ದಾರೆ. ಭಾರತದಲ್ಲಿರುವ ನನ್ನ ವಕೀಲರಿಗೆ ಪಾವತಿಸಲು ನನ್ನ ಬಳಿ ಹಣವಿಲ್ಲ, ಹಾಗಾಗಿ ನ್ಯಾಯಾಲಯದ ನಿಧಿಯಿಂದ ನನಗೆ ಹಣ ಕೊಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಆಸ್ತಿಗಳು ಮುಟ್ಟುಗೋಲಾಗಿವೆ. ಹಾಗಾಗಿ ನಾನು ನೇರವಾಗಿ ಹಣ ಪಾವತಿಸಲು ಸಾಧ್ಯವಿಲ್ಲ. ಕಾರಣ ಲಂಡನ್​ ನ್ಯಾಯಾಲಯದ ನಿಧಿಯಿಂದ ಹಣ ಕೊಡುವಂತೆ ಕೋರಲಾಗಿದೆ. ಒಟ್ಟು 7,58,000 ಯೂರೋ (7.8 ಕೋಟಿ ರೂಪಾಯಿ) ಕೇಳಿ ಮನವಿ ಮಾಡಿರುವುದಾಗಿ ಹೇಳಲಾಗಿದೆ.

ಮಲ್ಯ ಅವರು ಭಾರತದಲ್ಲಿ ಕಾನೂನು ಸಂಸ್ಥೆಗಳಿಗೆ 5,55,000 ಯೂರೋ (5.7 ಕೋಟಿ ರೂ.) ಬಾಕಿ ಉಳಿಸಿದ್ದಾರೆ. ಭವಿಷ್ಯದ ಕಾನೂನು ಹೋರಾಟಕ್ಕೆ 2,03,000 ಯೂರೋ (ಎರಡು ಕೋಟಿ ರೂಪಾಯಿ) ಬೇಕಾಗಲಿದೆ ಎಂದು ಮಲ್ಯ ಪರ ವಕೀಲರು ಲಂಡನ್​ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net