ನಾನು ಸಿಂಗಲ್ ಅಲ್ಲ..ಡೇಟಿಂಗ್​ನಲ್ಲಿರುವೆ ಎಂದ ವಿಜಯ್​ ದೇವರಕೊಂಡ! ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ? | Vijay Deverakonda

Vijay Deverakonda
Published on

ಮುಂಬೈ: ನಾನು ಸದ್ಯ ಡೇಟಿಂಗ್​ನಲ್ಲಿ ಇದ್ದೇನೆ ಎಂದು ಟಾಲಿವುಡ್​ ಸ್ಟಾರ್​ ವಿಜಯ್​ ದೇವರಕೊಂಡ(Vijay Deverakonda) ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಸಂಬಂಧದ ವದಂತಿ ಬಗ್ಗೆ ಸೇರಿದಂತೆ ತಮ್ಮ ಪ್ರೀತಿ, ಸಂಬಂಧ ಮತ್ತು ಮದುವೆಯ ಆಲೋಚನೆಗಳ ಬಗ್ಗೆ ಸ್ವಾರಸ್ಯಕರವಾದ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದುವರೆದು ಮಾತನಾಡಿರುವ ವಿಜಯ್​, '' ನನಗೆ ಈಗ 35 ವರ್ಷ, ಒಬ್ಬಂಟಿಯಾರುತ್ತೇನೆ ಎಂದು ನೀವು ಭಾವಿಸುತ್ತಿರಾ?, ನಾನು ಸದ್ಯ ಒಬ್ಬರ ಜತೆ ಸಂಬಂಧದಲ್ಲಿ ಇದ್ದೇನೆ. ಅಲ್ಲದೇ,ಈ ಹಿಂದೆ ಸಹ ನಟಿಯರೊಂದಿಗೆ ಕೂಡ ಡೇಟಿಂಗ್​ ಮಾಡಿರುವೆ ಎಂದು ಧೃಢಪಡಿಸಿದ ಅವರು, ನಮ್ಮ ಜತೆ ಯಾರದರೂ ಅಳವಾದ ಮತ್ತು ಬಲವಾದ ಸ್ನೇಹ ಹೊಂದಿದ್ದರೆ ಮಾತ್ರ ನಾನು ಡೇಟಿಂಗ್​ಗೆ ಹೋಗುತ್ತೇನೆ'' ಎಂದರು.

ಇನ್ನೂ ರಶ್ಮಿಕಾ ಮಂದಣ್ಣ ಜತೆಗಿನ ಸಂಬಂಧದ ವದಂತಿ ಬಗ್ಗೆ ಕೇಳಿದಾಗ, '' ರಶ್ಮಿಕಾ ಮಂದಣ್ಣ ನಾನು ಒಳ್ಳೆ ಸ್ನೇಹಿತರು. ಗೀತಾ ಗೋವಿಂದಂ ಮತ್ತು ಕಾಮ್ರೇಡ್​ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಜನರು ಅ ರೀತಿಯ ಭಾವನೆಗಳನ್ನು ಮುಂದುವರೆಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸೋಷಿಯಲ್​ ಮೀಡಿಯಾ ಸಾಥ್​ ನೀಡುವುದರಿಂದ ಊಹಪೋಹಗಳು ಹೆಚ್ಚಿವೆ ಎಂದು ಅವರು ರಶ್ಮಿಕಾ ಸಂಬಂಧದ ಬಗ್ಗೆ ಅಲ್ಲಗೆಳೆದರು. ಅಲ್ಲದೆ, ರಶ್ಮಿಕಾರ ಮುಂಬರುವ ವಿಡಿ 12 ಮತ್ತು ಪುಷ್ಪ-2 ಚಿತ್ರದ ಬಗ್ಗೆ ಮತ್ತು ರಶ್ಮಿಕಾ ಬಗ್ಗೆ ಹೊಗಳಿದರು''.

ವಿಜಯ್​ ದೇವರಕೊಂಡ ಸಿನಿಮಾ ವಿಚಾರಕ್ಕೆ ಬರುವುದಾರೆ ತಾತ್ಕಾಲಿಕವಾಗಿ ವಿಡಿ 12 ಎಂದು ನಾಮಕರಣ ಮಾಡಿದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಜರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನ ಮಾಡುತ್ತಿದ್ದು, ಗೂಢಚಾರಿ ಕಥೆಯನ್ನು ಹೊಂದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net