ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಸಮಂತಾ-ವಿಜಯ್​ ಹಾಟ್​ ಡಾನ್ಸ್ ವಿಡಿಯೋ​: ನೆಟ್ಟಿಗರು ಹೇಳಿದ್ದಿಷ್ಟು….

samantha Vijay
Published on

ಹೈದರಾಬಾದ್​: ನಟಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಲವ್​, ರೊಮ್ಯಾಂಟಿಕ್​ ಎಂಟರ್ಟೈನ ರ್ಚಿತ್ರವಾಗಿದ್ದು, ಶಿವ ನಿರ್ವಾಣ ಎಂಬುವರು ನಿರ್ದೇಶನ​ ಮಾಡಿದ್ದಾರೆ. ಈ ಸಿನಿಮಾದ ಕೆಲ ಹಾಡುಗಳು ಮತ್ತು ಟ್ರೈಲರ್​ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನು ಗಮನ ಸೆಳೆದಿದೆ. ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್​ ನಿರ್ಮಾಣ ಮಾಡಿದ್ದು, ಮಲಯಾಳಂ ಸಂಗೀತ ನಿರ್ದೇಶಕ ಹೇಶಮ್​ ಅಬ್ದುಲ್​ ವಾಹಬ್​ ಮ್ಯೂಸಿಕ್​ ನೀಡಿದ್ದಾರೆ. ಸೆಪ್ಟೆಂಬರ್​ 1ಕ್ಕೆ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಖುಷಿ ಸಿನಿಮಾ ತಂಡ ಇತ್ತೀಚೆಗಷ್ಟೇ ಪ್ರಚಾರ ಕಾರ್ಯ ಶುರು ಮಾಡಿದೆ. ಆಗಸ್ಟ್​ 15ರ ಸ್ವಾಂತಂತ್ರ್ಯ ದಿನದಂದು ಚಿತ್ರತಂಡ ಹೈದರಾಬಾದ್​ನ ಎಚ್​ಐಸಿಸಿ ಹಾಲ್​ನಲ್ಲಿ ಸಂಜೆ 6 ಗಂಟೆಗೆ ವಿಶೇಷವಾಗಿ ಸಂಗೀತ ಸಂಜೆ ಆಯೋಜನೆ ಮಾಡಿತ್ತು. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಾಹಿಬ್, ಸಿದ್ ಶ್ರೀರಾಮ್, ಜಾವೇದ್ ಅಲಿ, ಅನುರಾಗ್ ಕುಲಕರ್ಣಿ, ಹರಿಚರಂ ಮತ್ತು ಚಿನ್ಮಾಯಿ ಅವರು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು.

ಇದೇ ಈವೆಂಟ್​ನಲ್ಲಿ ಸಮಂತಾ ಮತ್ತು ವಿಜಯ್​ ದೇವರಕೊಂದು ವೇದಿಕೆ ಮೇಲೆ ಡಾನ್ಸ್​ ಮಾಡಿದರು. ಅನೇಕ ಹೀರೋ-ಹೀರೋಯಿನ್​ ಅನೇಕ ವೇದಿಕೆಗಳ ಮೇಲೆ ಡಾನ್ಸ್​ ಮಾಡಿದ್ದಾರೆ. ಆದರೆ, ಸಮಂತಾ-ವಿಜಯ್​ ಡಾನ್ಸ್​ಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಡಾನ್ಸ್​ ವೇಳೆ ವಿಜಯ್​ ತಮ್ಮ ಶರ್ಟ್​ ಅನ್ನು ತೆಗೆದು ಕೇವಲ ಬನಿಯನ್​ನಲ್ಲಿ ಸಮಂತಾರನ್ನು ಎತ್ತುಕೊಂಡು ವಿನೂತನವಾಗಿ ಹೆಜ್ಜೆ ಹಾಕಿದರು.

ನಾಯಕಿಗಿಂತ ಭಿನ್ನವಾಗಿ ಹೀರೋಗೆ ಡಾನ್ಸ್ ಮಾಡುವ ಡಾನ್ಸರ್​ ರೀತಿ ಕಾಣುವಂತೆ ಡ್ರೆಸ್​ ಮಾಡಲಾಗಿದೆ ಎಂದು ನೆಟಿಗ್ಗರು ವಿಜಯ್​ ದೇವರಕೊಂಡ ಅವರ ಡ್ರೆಸ್ಸಿಂಗ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಸಮಂತಾ ಅಭಿಮಾನಿಗಳು ಕೂಡ ಸಮಂತಾ ಹೀಗೆ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ವಿರುದ್ಧವೂ ಮೀಮ್ಸ್, ಟ್ರೋಲ್‌ಗಳು ಹರಿದಾಡುತ್ತಿವೆ. ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ಬದಲಾಗಿದ್ದಾರೆ, ಮೊದಲಿನ ಹಾಗೆ ಆತುರದ ಸ್ವಭಾವವಿಲ್ಲ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಖುಷಿ ಸಿನಿಮಾ ಸಂಗೀತ ಸಂಜೆಯ ವಿಡಿಯೋ ನೋಡಿದ ಅಭಿಮಾನಿಗಳು ವಿಜಯ್ ಏನೂ ಬದಲಾಗಿಲ್ಲ. ಸ್ವಲ್ಪ ಗ್ಯಾಪ್ ಕೊಟ್ಟಿದ್ದರು ಅಷ್ಟೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ನಾಗಚೈತನ್ಯ ಅವರ ಅಭಿಮಾನಿಗಳು ಕೂಡ ಈ ಡಾನ್ಸ್ ನೋಡಿದ್ದಾರೆ. ಆದರೆ ಸಮಂತಾ ಅವರು ಚೈತು ಜೊತೆ ಈ ರೇಂಜ್‌ನಲ್ಲಿ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನು ಸಮಂತಾರಿಂದ ನಿರೀಕ್ಷೆ ಮಾಡಿರಲಿಲ್ಲ. ನಾಗಚೈತನ್ಯಗೆ ಉರಿಸಬೇಕೆಂದೇ ಈ ರೀತಿಯ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತಾ ನೆಗೆಟಿವ್ ಕಾಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ. ಸದ್ಯ ವಿಜಯ್ ಮತ್ತು ಸಮಂತಾ ಅವರ ಡಾನ್ಸ್ ಫೋಟೋಗಳು ಇದೀಗ ವೈರಲ್ ಆಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net