

ಬೆಂಗಳೂರು: ಬ್ಯಾಂಕಾಕ್ನಲ್ಲಿ ಹಠಾತ್ ಸಾವಿಗೀಡಾಗಿದ್ದ ಸ್ಪಂದನಾ ಅಂತಿಮ ಸಂಸ್ಕಾರ ಇಂದು ಹರಿಶ್ಚಂದ್ರ ಘಾಟ್ನಲ್ಲಿ ನಡೆಯುತ್ತಿದ್ದು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಪತಿ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾಗೆ ತಾಳಿ ಕಟ್ಟುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ಅವರು ಮುತ್ತೈದೆಯಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಈಡಿಗ ಸಂಪ್ರದಾಯದಂತೆ ಸ್ಪಂದನಾಗೆ ವಿಜಯ ರಾಘವೇಂದ್ರ ಈಗ ಮತ್ತೊಮ್ಮೆ ತಾಳಿ ಕಟ್ಟಿದ್ದಾರೆ ಎನ್ನಲಾಗಿದೆ.
ಹರಿಶ್ಚಂದ್ರ ಘಾಟ್ನ ವಿದ್ಯುತ್ ಶವಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯುತ್ತಿದ್ದು, ಕುಟುಂಬದ ಸದಸ್ಯರು, ಸಿನಿಮಾ ನಟರು ಹಾಗೂ ಆಯ್ದ ಕೆಲವು ಗಣ್ಯರಿಗಷ್ಟೇ ಒಳಗೆ ಪ್ರವೇಶ ಕಲ್ಪಿಸಲಾಗಿದೆ. ಶವಾಗಾರದ ಎಡಭಾಗದಲ್ಲಿರುವ ಕೊಠಡಿಯಲ್ಲಿ ಅಂತಿಮ ವಿಧಿ-ವಿಧಾನ ನಡೆದಿದೆ.
ಈಡಿಗ ಸಮುದಾಯದ ಸಂಪ್ರದಾಯದಂತೆ ಸ್ಪಂದನಾ ವಿಧಿ ವಿಧಾನ ನೇರವೇರುತ್ತಿದೆ. ಈಗಾಗಲೇ ಎಲ್ಲಾ ಸಂಪ್ರದಾಯವನ್ನು ಮನೆಯಲ್ಲಿಯೇ ಮಾಡಲಾಗಿದೆ. ಹನ್ನೊಂದು ದಿನಗಳ ಕಾಲ ಪೂಜೆಗಳು ನಡೆಯುತ್ತದೆ. ಮಗ ಶೌರ್ಯ ಮತ್ತು ಕುಟುಂಬದ ಸದಸ್ಯರ ಮೂಲಕ ವಿಧಿ ವಿಧಾನವನ್ನು ಮನೆ ಹತ್ತಿರ ಬೆಳಗ್ಗೆಯೇ ಮಾಡಿಸಿದ್ದೇವೆ. ಈಡಿಗ ಬಿಲ್ಲವ ಸಂಪ್ರದಾಯದಂತೆ ನಾರಾಯಣ ಗುರುಗಳು ಹೇಳಿದಂತೆ ಶಾಸ್ತ್ರ ಮಾಡಲಾಗಿದೆ. ನಾವು ಮೃತದೇಹವನ್ನು ಹೂಳುವಂತಿಲ್ಲ ಸುಡಬೇಕೆಂದು ಸೂಚನೆ ಇದೆ ಎಂದು ಈಡಿಗ ಸಮುದಾಯದ ಪ್ರಣವಾನಂದಶ್ರೀ ಮಾಹಿತಿ ನೀಡಿದ್ದಾರೆ.