ಅವಳಿ ಮಕ್ಕಳ ತಂದೆಯಾಗಿದ್ದೇನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ; ವಿಘ್ನೇಶ್ ಶಿವನ್ ಹೀಗೇಕೆ ಅಂದ್ರು?

#VigneshShivan #Nayanthara
Published on

ನವದೆಹಲಿ: ತಮಿಳು ಚಿತ್ರರಂಗದ ಸ್ಟಾರ್ ನಟಿ ನಯನತಾರ ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದರು. ತಾಯಿಯಾಗಿರುವ ಖುಷಿಯ ವಿಚಾರವನ್ನು ನಯನತಾರ ಪತಿ ವಿಘ್ನೇಶ್​ ಶಿವನ್ ಟ್ವಿಟರ್​ ಮೂಲಕ ತಿಳಿಸಿ, ಸುದ್ದಿಯಾಗಿದ್ದರು. ಇದೀಗ ಸಂದರ್ಶನವೊಂದರಲ್ಲಿ ವಿಘ್ನೇಶ್ ಶಿವನ್ ಮಾತನಾಡುತ್ತಾ, ನಾನು ತಂದೆಯಾಗಿದ್ದೇನೆ ಎಂದು ನನಗೆ ಇನ್ನೂ ನಂಬಿಕೆ ಬರುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ವಿಘ್ನೇಶ್ ಶಿವನ್ ಮಾತನಾಡುತ್ತಾ, ನಾನು ನನ್ನ ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ಇದಿರಿಂದ ನನಗೆ ಹೆಚ್ಚಿನ ಸಂತೋಷ ಸಿಗುತ್ತಿದೆ. ಮಕ್ಕಳು ಬಂದ ನಂತರ ನನ್ನ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಿವೆಯೋ ಅದೆಲ್ಲದಕ್ಕೂ ಅರ್ಹನಾಗಿದ್ದೇನೆ ಎಂಬ ನಂಬಿಕೆ ನನಗಿದೆ. ಏನು ಬೇಡಿಕೊಂಡಿದ್ದೆನೋ, ಅದನ್ನೇ ದೇವರು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಏಳು ವರ್ಷಗಳ ಡೇಟಿಂಗ್​ ನಂತರ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ಜೂನ್ 9ರಂದು ವಿವಾಹವಾಗಿದ್ದರು. ಇದೀಗ ಈ ದಂಪತಿ ಅವಳಿ ಗಂಡು ಮಕ್ಕಳ ಪೋಷಕರಾಗಿದ್ದಾರೆ. ಬಾಡಿಗೆ ತಾಯ್ತತನದ ಮೂಲಕ ಮಕ್ಕಳನ್ನು ಪಡೆದಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net