ಹಾವೇರಿ ವಿದ್ಯಾಥಿರ್ನಿಯರ ಜಾಗೃತಿಗೆ ತ್ರಿಶೂಲ ದೀೆಕ್ಷೆ ಅಭಿಯಾನ; ಪ್ರಮೋದ ಮುತಾಲಿಕ್​ ಹೇಳಿಕೆ

ರಾಣೆಬೆನ್ನೂರ: ರಾಜ್ಯದಲ್ಲಿಯೆ ಅತಿಹೆಚ್ಚು ಲವ್​ಜಿಹಾದ್​ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ವಿದ್ಯಾಥಿರ್ನಿಯರಿಗೆ ತ್ರಿಶೂಲ ದೀೆ ನೀಡುವ ಮೂಲಕ ಜಾಗೃತಿ ಅಭಿಯಾನ ಆರಂಭಿಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್​ ತಿಳಿಸಿದರು.
ನಗರದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಲವ್​ ಜಿಹಾದ್​ ಟನೆಗಳಲ್ಲಿ ಹಾವೇರಿ 1ನೇ ಸ್ಥಾನದಲ್ಲಿದೆ. ಆದ್ದರಿಂದ ಜಿಲ್ಲೆಯ ವಿದ್ಯಾಥಿರ್ನಿಯರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆಯಿದೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ ಮಾಡುತ್ತೇವೆ ಎಂದರು.
ಲವ್​ಜಿಹಾದ್​ ತಡೆಯುವ ನಿಟ್ಟಿನಲ್ಲಿ ಶ್ರೀರಾಮ ಸೇನೆ ವತಿಯಿಂದ ರಾಜ್ಯದ ಐದು ಕಡೆ ಹೆಲ್ಪಲೈನ್​ ಕೇಂದ್ರ ತೆರೆಯಲಾಗಿದೆ. ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಮೈಸೂರು, ಕಲ್ಬುಗಿರ್ಯಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಲವ್​ ಜಿಹಾದ್​ಗೆ ಸಿಲುಕಿರುವ ಯುವತಿಯರ ಪಾಲಕರು ಹೆಲ್ಪಲೈನ್​ ಸಂಖ್ಯೆ 9090443444ಗೆ ಕರೆ ಮಾಡಿ ತಮ್ಮ ಸಮಸ್ಯೆ ತಿಳಿಸಿದರೆ, ಅವರಿಗೆ ನಾವು ನೆರವು ನೀಡುತ್ತೇವೆ. ಕೇಂದ್ರದಲ್ಲಿ ಒಬ್ಬ ವೈದ್ಯರು, ವಕೀಲ, ಇಬ್ಬರು ಆಪ್ತ ಸಮಾಲೋಚಕರು ಇರುತ್ತಾರೆ. ಅವರ ಮೂಲಕ ಯುವತಿಯರ ಮನ ಪರಿವರ್ತನೆಗೆ ಪ್ರಯತ್ನಿಸಲಾಗುತ್ತದೆ. ರಾಜ್ಯಾದ್ಯಂತ ಈವರೆಗೂ 80ಕ್ಕೂ ಅಧಿಕ ಹುಡುಗಿಯರ ಮನ ಪರಿವರ್ತನೆ ಮಾಡಲಾಗಿದೆ ಎಂದು ತಿಳಿಸಿದರು.
ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಕ್ರೌರ್ಯ ಜೋರಾಗಿದೆ. ಅಲ್ಲಿನ ಹಿಂದುಗಳ ರಣೆಗೆ ಕೇಂದ್ರ ಸರ್ಕಾರ ತುರ್ತು ಕ್ರಮ ಜರುಗಿಸಬೇಕು. 1971ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನ ವಿಭಜಿಸಿ ಬಾಂಗ್ಲಾ ದೇಶ ರಚನೆ ಮಾಡಿದರು. ಅದೇ ಮಾದರಿಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್​ ಷಾ ಬಾಂಗ್ಲಾ ದೇಶವನ್ನು ಒಡೆದು ಹಿಂದುಗಳಿಗೆ ಪ್ರತ್ಯೇಕ ಹಿಂದು ಬಾಂಗ್ಲಾ ದೇಶ ರಚಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಪ್ರಕಾಶ ಮಣೆಗಾರ, ವೆಂಕಟೇಶ ಏಕಬೋಟೆ, ರಾಯಣ್ಣ ಮಾಕನೂರ, ಗದಿಗೆಪ್ಪ, ದೇವರಾಜ, ರಮೇಶ ಮಾಕನೂರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…