ನವದೆಹಲಿ: ಇದೀಗ ಮಳೆಗಾಲವಾಗಿರುವುದರಿಂದ ದೇಶಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದಾಗಿ ಹಲವು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಚೀನಾದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪ ಹೆಚ್ಚಿದೆ. ಚೀನಾದಲ್ಲಿ ಶಾಖದ ಹೊಡೆತ ಸುಮಾರು 80 ದಿನಗಳವರೆಗೆ ಮುಂದುವರಿಯುತ್ತದೆ. ಇದರಿಂದಾಗಿ ಚೀನಾದಲ್ಲಿ ದಾಖಲೆಯ ತಾಪಮಾನ ದಾಖಲಾಗುತ್ತಿದೆ. ಅದರಲ್ಲೂ ಆ ದೇಶದ 260ಕ್ಕೂ ಹೆಚ್ಚು ಸ್ಥಳಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಿದೆ.
ಚೀನಾದಲ್ಲಿ ಬಿಸಿಲಿನ ಝಳಕ್ಕೆ ಜನ ಪರದಾಡುತ್ತಿರುವಾಗ ಅಲ್ಲಿನ ಘಟನೆಯೊಂದು ಇಡೀ ವಿಶ್ವದ ಗಮನ ಸೆಳೆದಿದೆ. ಚೀನಾದಲ್ಲಿ ಕಾರುಗಳ ಬಾನೆಟ್ ಬಲೂನ್ ರೀತಿ ಊದಿಕೊಳ್ಳುತ್ತಿವೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಕಾರಿನ ಬಾನೆಟ್ ಉಬ್ಬಿಕೊಳ್ಳುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಸಹ ಇದೆ. ಅದೇನೆಂದು ನಾವೀಗ ತಿಳಿಯೋಣ.
ಚೀನಾದಲ್ಲಿ ಬಲೂನ್ನಂತೆ ಊದಿಕೊಂಡ ಕಾರನ್ನು ನೋಡಿ ನೆಟ್ಟಿಗರು ಒಂದು ಹೆಸರು ಸಹ ನೀಡಿದ್ದಾರೆ. ಗರ್ಭಿಣಿ ಕಾರು ಎಂದು ಕರೆಯುತ್ತಿದ್ದಾರೆ. ಅಲ್ಲದೆ, ಚೀನಾದ ಕಾರುಗಳ ತಯಾರಿಕೆಯಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಚೀನಾದಲ್ಲಿನ ಶಾಖದ ಅಲೆಯಿಂದಾಗಿ ಕಾರುಗಳ ಬಾನೆಟ್ ಬಲೂನಿನಂತೆ ಊದಿಕೊಳ್ಳುತ್ತಿದೆ.
ಕಾರಣವೇನು?
ಕಾರಿನ ಬಣ್ಣವನ್ನು ರಕ್ಷಣೆ ಮಾಡಲು, ಅದರ ಆಕರ್ಷಣೆಗಾಗಿ ಅಥವಾ ಜಾಹೀರಾತುಗಳನ್ನು ಪ್ರದರ್ಶಿಸುವ ಸಲುವಾಗಿ ಕಾರಿನ ಮೇಲೆ ತೆಳುವಾದ ವಿನೈಲ್ ಫಿಲ್ಮ್ಗಳನ್ನು ಅಳವಡಿಸಲಾಗಿರುತ್ತದೆ. ಈ ಹೊದಿಕೆಗಳನ್ನು ವಿವಿಧ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಆದರೆ, ತೀವ್ರವಾದ ಶಾಖವನ್ನು ತಡೆಕೊಳ್ಳಲಾಗದೇ ವಿನೈಲ್ ಫಿಲ್ಮ್ ಹೊದಿಕೆ ಈ ರೀತಿ ಬಲೂನ್ನಂತೆ ಊದಿಕೊಳ್ಳುತ್ತದೆ.
ಅಂದಹಾಗೆ ಇಂತಹ ಸಮಸ್ಯೆಗಳ ವಿರುದ್ಧ ರಕ್ಷಿಸಲು ಕಾರಿನ ಹೊದಿಕೆಗಳು ವಿಶಿಷ್ಟವಾಗಿ ಅಲ್ಟ್ರಾ ವೈಲೆಟ್ (ನೇರಳಾತೀತ ಕಿರಣ) ರಕ್ಷಣಾತ್ಮಕ ಪದರವನ್ನು ಹೊಂದಿದ್ದರೂ, ಚೀನಾದಲ್ಲಿ ದಾಖಲೆ ತಾಪಮಾನ ಕಾರಣದಿಂದಾಗಿ ಕೆಲವು ಹೊದಿಕೆಗಳಿಗೆ ಹೆಚ್ಚಿನ ಪ್ರಮಾಣದ ಶಾಖ ತಗುಲಿ ಈ ಕಾರಿನ ಹೊದಿಕೆ ಊದಿಕೊಳ್ಳುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ನೋಡಿದ ನೆಟ್ಟಿಗರು ಕಾರುಗಳಿಗೆ ಏಕಾಏಕಿ ಏನಾಯಿತು ಎಂದು ಶಾಕ್ ಆಗಿದ್ದಾರೆ. ಸದ್ಯ ಈ ರೀತಿಯ ಚೈನೀಸ್ ಕಾರುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಚೀನಾದ ಕಾರುಗಳಷ್ಟೇ ಅಲ್ಲ, ಜರ್ಮನ್ ಕಾರುಗಳೂ ಈ ರೀತಿ ಪ್ರೆಗ್ನೆಂಟ್ ಆಗಿವೆ ಎನ್ನುತ್ತಿದ್ದಾರೆ. ಅದಲ್ಲದೆ, ಚೈನೀಸ್ ಮಾರುಕಟ್ಟೆಯಲ್ಲಿ ನಕಲಿ ಕಾರು ರಕ್ಷಣೆಯ ಬಣ್ಣಗಳ ಬಗ್ಗೆಯೂ ಜನರು ಚರ್ಚಿಸುತ್ತಿದ್ದಾರೆ. ಆದರೆ ಇದು ಕಾರುಗಳಲ್ಲಿನ ದೋಷವಲ್ಲ, ಇದಕ್ಕೆ ಕಾರಣ ತಾಪಮಾನ ಎಂಬುದು ಬಹುತೇಕರಿಗೆ ತಿಳಿದಿಲ್ಲ. (ಏಜೆನ್ಸೀಸ್)
China’s record heatwave causes cars to develop bulges. Prolonged exposure to direct sunlight can potentially affect the longevity and appearance of car wraps. pic.twitter.com/UZAxxa0Ls8
— Creepy.org (@creepydotorg) August 10, 2024
ಟಿಕೆಟ್ ಕೊಳ್ಳಲು 2 ರೂ. ಕಡಿಮೆ: ರಾತ್ರಿ ಅಂತ ನೋಡದೆ ವಿದ್ಯಾರ್ಥಿನಿಯನ್ನು ಬಸ್ನಿಂದ ಕೆಳಗಿಳಿಸಿದ ಕಂಡಕ್ಟರ್!
ಖ್ಯಾತ ನಟಿಯೊಂದಿಗೆ ಸಿಕ್ಕಿಬಿದ್ದ ಹಾರ್ದಿಕ್ ಪಾಂಡ್ಯ! ನತಾಶಾ ಬ್ರೇಕಪ್ ಹಿಂದಿರುವ ಬ್ಯೂಟಿ ಇವಳೇನಾ?