Vijaya Dashamiಯಂದು ಅತ್ತೆ, ಪತಿಯ ಪ್ರತಿಕೃತಿ ಮಾಡಿ ದಹಿಸುತ್ತಾಳೆ ಈಕೆ; ಕಾರಣವೇನು ಗೊತ್ತಾ?

UP Dahan

ಲಖನೌ: ನಾವು ನೋಡಿರುವಂತೆ ಸಾಮಾನ್ಯವಾಗಿ ವಿಜಯದಶಮಿಯ (Vijaya Dashami)ದಿನದಂದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ರಾವಣನ (Ravan) ಪ್ರತಿಕೃತಿ ದಹಿಸುವುದನ್ನು ನೋಡಿದ್ದೇವೆ. ದಶಮಿಯಂದು (Vijaya Dashami) ನಡೆಯುವ ಈ ಕಾರ್ಯಗಳಿಗೆ ವಿಶೇಷವಾದ ಮಹತ್ವವಿದೆ. ಆದರೆ, ಇಲ್ಲೊಬ್ಬ ಮಹಿಳೆ ವಿಜಯದಶಮಿಯ (Vijaya Dashami) ದಿನದಂದು ಅತ್ತೆ ಹಾಗೂ ಗಂಡನ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಹಮೀರ್​ಪುರ (UttarPradesh Hamirpur) ಜಿಲ್ಲೆಯಲ್ಲಿ ನಡೆದಿದೆ.

ದಸರಾ (Dasara) ದಿನದಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ (Social Media) ವೈರಲ್​ ಆಗಿದೆ. ಮಹಿಳೆಯ ಕೃತ್ಯವನ್ನು ಹಲವರು ಪ್ರಶ್ನಿಸಿದ್ದು, ರಾವಣನ (Ravan) ಬದಲಿಗೆ ಅತ್ತೆ ಹಾಗೂ ಗಂಡನ ಪ್ರತಿಕೃತಿಯನ್ನು ಯಾಕೆ ದಹಿಸಿದೆ ಎಂಬುದಕ್ಕೆ ಕಾರಣವನ್ನು ನೀಡಿದ್ದಾರೆ.

ಇದನ್ನೂ ಓದಿ: ಪಾಕ್​ನಲ್ಲಿ ದಿಢೀರ್​ Lockdown ಘೋಷಿಸಿದ ಸರ್ಕಾರ; ಶಾಲಾ-ಕಾಲೇಜು ಬಂದ್​, ಮದುವೆ ನಿಷೇಧ ಹೀಗಿದೆ ಕಾರಣ

ಪ್ರಿಯಾಂಕಾ (Priyanka) ಎಂಬುವವರು 14 ವರ್ಷಗಳ ಹಿಂದೆ ಸಂಜೀವ್​ ದೀಕ್ಷಿತ್ (Sanjeev Deekshith)​ ಎಂಬುವವರನ್ನು ವಿವಾಹವಾಗಿದ್ದರು (Marriage). ಆದರೆ, ಆ ವ್ಯಕ್ತಿ ಪ್ರಿಯಾಂಕಾ ಅವರ ಸಹೋದರಿಯ ಸ್ನೇಹಿತೆ ಪುಷ್ಪಾಂಜಲಿಯೊಂದಿಗೆ (Pushpanjali) ಅಕ್ರಮ ಸಂಬಂಧವನ್ನು (Illicit Relationship) ಹೊಂದಿದ್ದ. ಮದುವೆಯಾದ ಬಳಿಕ ಈ ವಿಚಾರ ಪ್ರಿಯಾಂಕಾ ಗಮನಕ್ಕೆ ಬಂದಿದ್ದು, ಸಂಜೀವ್ ಪ್ರಿಯಾಂಕಳನ್ನು ತೊರೆದು ಪುಷ್ಪಾಂಜಲಿಯೊಂದಿಗೆ ವಾಸಿಸಲು ಆರಂಭಿಸಿದ್ದಾನೆ. ಈ ಬಗ್ಗೆ ಪ್ರಿಯಾಂಕಾ ಪ್ರಶ್ನಿಸಿದಾಗ ಸಂಜೀವ್ ಹಾಗೂ ಆತನ ಇಡೀ ಕುಟುಂಬಸ್ಥರು ಆಕೆಯ ಮೇಲೆ ಹಲ್ಲೆ (Assault) ನಡೆಸಿದ್ದಾರೆ.

ತನ್ನ ಪತಿ ಹಾಗೂ ಆತನ ಕುಟುಂಬಸ್ಥರು ತನಗೆ ಮಾಡಿರುವ ಅನ್ಯಾಯವನ್ನು ಖಂಡಿಸಿ ಪ್ರಿಯಾಂಕಾ ದಶಮಿಯ (Vijaya Dashami) ದಿನದಂದು ಪತಿ ಹಾಗೂ ಅತ್ತೆಯ ಮುಖವಾಡ ಇರುವ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದು, ತನಗೆ ನ್ಯಾಯ ಕೊಡಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ (Yogi Adityanath) ಅವರಿಗೆ ಪತ್ರ ಬರೆದಿದ್ದಾಳೆ. ಅಲ್ಲದೇ ಪತಿ ಹಾಗೂ ಅತ್ತೆಯ ವಿರುದ್ಧ ಕಠಿಣ ಕಾನೂನು ಕ್ರಮ (legal Action) ಜರುಗಿಸುವಂತೆ ಪ್ರಿಯಾಂಕಾ (Priyanka) ಆಗ್ರಹಿಸಿದ್ದಾಳೆ.

Share This Article

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…

ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…