ಪಾಕ್​ನಲ್ಲಿ ದಿಢೀರ್​ Lockdown ಘೋಷಿಸಿದ ಸರ್ಕಾರ; ಶಾಲಾ-ಕಾಲೇಜು ಬಂದ್​, ಮದುವೆ ನಿಷೇಧ ಹೀಗಿದೆ ಕಾರಣ

Pak Lockdown
Published on

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಕೆಲಸಗಳಿಂದಲೇ ಸುದ್ದಿಯಲ್ಲಿರುವ ನೆರೆಯ ದೇಶ ಪಾಕಿಸ್ತಾನವು (Pakistan) ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ. ಹೌದು ಪಾಕಿಸ್ತಾನದಲ್ಲಿ (Pakistan) ಎರಡು ದಿನಗಳ ಮಟ್ಟಿಗೆ ಲಾಕ್​ಡೌನ್​ (Lockdown) ಘೋಷಿಸಲಾಗಿದ್ದು, ಶಾಲಾ-ಕಾಲೇಜು (School-College), ಮದುವೆಗೆ (Marriage) ನಿರ್ಬಂಧ ಹೇರಲಾಗಿದೆ. ಕೋವಿಡ್​ (Covid) ಇಲ್ಲದಿದ್ದರೂ ದಿಢೀರ್​ ಲಾಕ್​ಡೌನ್​ (Lockdown) ಹೇರಲು ಕಾರಣ ಏನು ಎಂದು ಹಲವರು ಯೋಚಿಸುತ್ತಿದ್ದು, ಈ ಬಗ್ಗೆ ಪಾಕ್​ ಸರ್ಕಾರ (Pak Government) ಕಾರಣವನ್ನು ನೀಡಿದೆ.

ಅಕ್ಟೋಬರ್​ 15-16ರಂದು ಪಾಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಸ್ಥೆಯ (SCO) ಸಭೆ ನಡೆಯಲಿದ್ದು, ಭದ್ರತೆಯ ಕಾರಣ ಎರಡು ದಿನಗಳ ಕಾಲ ಲಾಕ್​ಡೌನ್​ (Lockdwon) ಘೋಷಿಸಲಾಗಿದೆ. ಬೇರೆ ದೇಶಗಳಿಂದ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (Jaishankar) ಮತ್ತು ಚೀನಾದ ಪ್ರಧಾನಿ ಲಿ ಕಿಯಾಂಗ್ (lee Kiyang) ಸೇರಿದಂತೆ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Pak SCO Meet

ಎಸ್​ಸಿಒ ಶೃಂಗಸಭೆ (SCO Summit) ಬೆನ್ನಲ್ಲೇ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ (Imran Khan) ನೇತೃತ್ವದ PTI ಪಕ್ಷದ ನಾಯಕರು ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಭಯೋತ್ಪಾದಕ ದಾಳಿಗಳಿಂದಾಗಿ (Terror Attack) ಇಸ್ಲಾಮಾಬಾದ್​ (Islamabad) ಹಾಗೂ ರಾವಲ್ಪಿಂಡಿಯಲ್ಲಿ (Rawalpindi) ಮಿಲಿಟರಿ ನಿಯಂತ್ರಣದಲ್ಲಿ ಭದ್ರತೆಯನ್ನು ಇರಿಸಲು ಪಾಕಿಸ್ತಾನದ ಸರ್ಕಾರ ನಿರ್ಧರಿಸಿದ್ದು, ಈ ಕಾರಣಕ್ಕಾಗಿಯೇ ಲಾಕ್​ಡೌನ್​ (Lockdown) ಹೇರಲಾಗಿದೆ.

ಪಾಕಿಸ್ತಾನ ಸೇನೆಯ (Pakistan Army) ಸುಮಾರು 10,000 ಸೈನಿಕರು ಮತ್ತು ಕಮಾಂಡೋಗಳನ್ನು (Commandoes) ಇಸ್ಲಾಮಾಬಾದ್ (Islamabad) ಮತ್ತು ರಾವಲ್ಪಿಂಡಿಯಲ್ಲಿ (Rawalpindi) ನಿಯೋಜಿಸಲಾಗಿದ್ದು, ಅದರಂತೆ, ಸ್ಥಳೀಯ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಈಗ ನೇರವಾಗಿ ಮಿಲಿಟರಿಯಿಂದ ಆದೇಶಗಳನ್ನು ತೆಗೆದುಕೊಳ್ಳುತ್ತವೆ. ಅಕ್ಟೋಬರ್ 12 ರಿಂದ 16 ರವರೆಗೆ ಎರಡೂ ನಗರಗಳಲ್ಲಿ ಮದುವೆ ಹಾಲ್‌ಗಳು, ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸ್ನೂಕರ್ ಕ್ಲಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಒಂದು ವೇಳೆ ನಿಯಮವನ್ನು ಪಾಲಿಸದೆ ಇದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net