VIDEO | ಸೀರಿಸ್ ಗೆದ್ದ ನಂತರ ಯುವಿ​ಗೆ ಸಿಕ್ಕಿತು ವಿಶೇಷ ಸ್ವಾಗತ !

yuvi
Published on

ರಾಯಪುರ : ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್​ನಲ್ಲಿ ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತದ ತಂಡ ಜಯ ಸಾಧಿಸಿತು. ಈ ಪಂದ್ಯದಲ್ಲಿ ಉತ್ತಮ ಆಟ ಆಡಿದ ಯುವರಾಜ್ ಸಿಂಗ್​ರಿಗೆ ಹೋಟೆಲ್​​ಗೆ ವಾಪಸಾದಾಗ ವಿಶೇಷ ಸ್ವಾಗತ ಲಭಿಸಿದೆ.

ನಿನ್ನೆ ರಾಯಪುರದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಲ್ಕು ಸಿಕ್ಸರ್​ಗಳು ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದು ಭಾರತದ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದರು. ಭಾರತ ಗೆದ್ದ ಮೇಲೆ ತಾವು ತಂಗಿದ್ದ ಹೊಟೆಲ್​ಗೆ ಯುವಿ ವಾಪಸ್​ ಹೋದಾಗ, ಅಲ್ಲಿನ ಸಿಬ್ಬಂದಿ ಅವರಿಗೆ ಗಾರ್ಡ್ ಆಫ್​ ಆನರ್​ ರೀತಿಯಲ್ಲಿ ಬಾಹುಬಲಿ ಚಿತ್ರದ ಹಾಡು ಹಾಕಿ ಸ್ವಾಗತ ಕೋರಿದ್ದಾರೆ.

ಉದ್ದ ಹ್ಯಾಂಡಲ್ ಪ್ಯಾನ್​ಗಳನ್ನು ಕತ್ತಿಗಳಂತೆ ಮೇಲೆತ್ತಿ ನೀಡಲಾದ ಸ್ವಾಗತಕ್ಕೆ ಯುವರಾಜ್​ ಅಷ್ಟೇ ಸ್ಫೂರ್ತಿಯಿಂದ ಹೆಜ್ಜೆ ಹಾಕಿ ಪ್ರತಿಕ್ರಿಯಿಸಿದ್ದಾರೆ. ನಂತರ ಹಿಂದಿನಿಂದ ತೆಗೆಯಲಾಗಿರುವ ವಿಡಿಯೋ ತುಣುಕೊಂದನ್ನು ಯುವರಾಜ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಒಂದು ಕಾಲಿಗೆ ಕ್ರೇಪ್ ಬ್ಯಾಂಡೇಜ್ ಹಾಕಿಕೊಂಡು ಪ್ಯಾಂಟನ್ನು ಮೇಲಕ್ಕೇರಿಸಿರುವ ಯುವಿ, ಹಾಡಿಗೆ ಹೆಜ್ಜೆ ಹಾಕುತ್ತಿರುವ ತಮ್ಮ ವಿಡಿಯೋಗೆ ಬ್ರೋಕನ್ ಬಾಹುಬಲಿ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ! (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net