VIDEO | ಮೆಟ್ರೋದಲ್ಲಿ ಮಂಗ! ಸಭ್ಯವಾಗಿ ಸೀಟಲ್ಲಿ ಕೂತು ಪ್ರಯಾಣ!

monkey
Published on

ನವದೆಹಲಿ : ದೆಹಲಿ ಮೆಟ್ರೋ ಟ್ರೈನಿನಲ್ಲಿ ಮಂಗವೊಂದು ಪ್ರಯಾಣ ಮಾಡುತ್ತಿರುವ ಕುತೂಹಲಕಾರಿ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲು ಕೋಚ್​​ನ ಎಲ್ಲೆಡೆ ಪರದಾಡುವ ಕೋತಿ ಕೊನೆಗೆ ಸೀಟೊಂದರಲ್ಲಿ ಪ್ರಯಾಣಿಕರ ಪಕ್ಕ ಹೋಗಿ ಕುಳಿತುಕೊಂಡು ಸಭ್ಯವಾಗಿ ನಡೆದುಕೊಳ್ಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಅಜಯ್ ತೋಮರ್ ಎಂಬುವರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. "ದೆಹಲಿ ಮೆಟ್ರೋದಲ್ಲಿ ಆನಂದ್ ವಿಹಾರ್​ನಿಂದ ದ್ವಾರಕಾವಾಲಿ ಟ್ರೈನ್​ನಲ್ಲಿ ಕೋತಿಯೊಂದು ನುಗ್ಗಿಬಂದಿತು. ಕೋತಿಯ ಪ್ರಯಾಣದ ನೋಟ ನೋಡಿ" ಎಂದು ಟಿಪ್ಪಣಿ ಬರೆದಿದ್ದಾರೆ. ಶನಿವಾರದಿಂದ ಹರಿದಾಡುತ್ತಿರುವ ಈ ತುಣುಕಲ್ಲಿ ವ್ಯಕ್ತಿಯೊಬ್ಬರು ಹಿಂದಿಯಲ್ಲಿ 'ಮಂಗಕ್ಕೂ ಮಾಸ್ಕ್​ ಹಾಕಿಬಿಡಿ' ಎನ್ನುವುದೂ ಕೇಳುತ್ತದೆ.

ವಿಡಿಯೋ ನಡುವೆ ಒಬ್ಬರು ಯಮುನಾ ಬ್ಯಾಂಕ್​ ಸ್ಟೇಷನ್ ಅಂತ ಹೇಳುವುದು ಕೇಳಿಸುತ್ತದೆ. ಸದರಿ ಸ್ಟೇಷನ್ ದೆಹಲಿ ಮೆಟ್ರೋನ ಬ್ಲೂ ಲೈನ್​ನಲ್ಲಿ ಬರುವುದರಿಂದ ಇದರ ಬಗ್ಗೆ ನೆಟ್ಟಿಗರು ನಗರದ ಮೆಟ್ರೋ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಇದಕ್ಕೆ ಮೆಟ್ರೊ ಅಧಿಕಾರಿಗಳು 'ಕೋಚ್​ ನಂಬರ್ ಮತ್ತು ಹಾಲಿ ಸ್ಟೇಷನ್ ಮಾಹಿತಿ ನೀಡಿ' ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net