

ಭಾರತ ಪರ ಸುಮಾರು 269 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶಿಖರ್ ಧವನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. 2024 ಆಗಸ್ಟ್ 24ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅಭಿಮಾನಿಗಳಲ್ಲಿ ಅವರ ಕ್ರೇಜ್ ಏನು ಕಡಿಮೆ ಆಗಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿಖರ್ ಧವನ್ ತನ್ನ ಸ್ನೇಹಿತರೊಂದಿಗೆ ಮನರಂಜನೆಗಾಗಿ ಮಾಡಿರುವ ವಿಡಿಯೋವೊಂದನ್ನು (Video VIral)ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು 60 ಮಿಲಿಯನ್ (6 ಕೋಟಿ)ಗೂ ಹೆಚ್ಚು ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಶಿಖರ್ ಧವನ್ ಟ್ರೆಂಡಿಂಗ್ ಹಾಡು 'ಲಡ್ಡು ಮುತ್ಯಾ' ಹಾಡುತ್ತಾ ಬಾಬಾನಂತೆ ಪೋಸ್ ಕೊಟ್ಟಿರುವುದನ್ನು ನೋಡಬಹುದು. ಇಬ್ಬರು ವ್ಯಕ್ತಿಗಳು ಶಿಖರ್ ಕುಳಿತಿರುವ ಚೇರ್ ಅನ್ನು ಎತ್ತುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಶಿಖರ್ ತನ್ನ ಕೈಗಳಿಂದ ಸೀಲಿಂಗ್ ಫ್ಯಾನ್ ಅನ್ನು ನಿಲ್ಲಿಸುತ್ತಾನೆ. ಹಾಡಿಗೆ ಕಂಪಿಸುತ್ತಿರುವ ಅವನ ಸುತ್ತಲಿನ ನಾಲ್ಕು ಜನರನ್ನು ಆಶೀರ್ವದಿಸುವುದನ್ನು ನೋಡಬಹುದು. ಶಿಖರ್ ಧವನ್ ಕುಳಿತಿರುವ ಕುರ್ಚಿಯನ್ನು ಕೆಳಗಿಳಿಸಿದ ಬಳಿಕ ವಿಡಿಯೋ ಕೊನೆಗೊಳ್ಳುತ್ತದೆ. ಶಿಖರ್ ಅವರ ವಿನೋದ ತುಂಬಿದ ಶೈಲಿಯನ್ನು ನೋಡಿ ನೆಟ್ಟಿಗರು ತುಂಬಾ ಸಂತೋಷಪಟ್ಟಿದ್ದಾರೆ.
21 ಸೆಕೆಂಡಿರುವ ಈ ತಮಾಷೆಯ ವಿಡಿಯೋವನ್ನು 6 ಕೋಟಿ 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 37 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 46 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಶಿಖರ್ ಧವನ್ ಅತ್ಯುತ್ತಮ ಹಾಸ್ಯನಟ, ಶಿಖರ್ ಧವನ್ ಟಾಪ್ ಬೆಸ್ಟ್ ಕಾಮಿಡಿಯನ್ ಎಂದು ಕಾಮೆಂಟ್ ಮಾಡಿದ್ದಾರೆ.
ವಿಡಿಯೋದಿಂದ ಪ್ರೇರಿತರಾಗಿ ನೀವು ಬಾಬಾ ಎಂದು ನಟಿಸಿ ಸೀಲಿಂಗ್ ಫ್ಯಾನ್ ಅನ್ನು ನಿಲ್ಲಿಸಲು ಪ್ರಯತ್ನಿಸಬೇಡಿ. ಸೀಲಿಂಗ್ ಫ್ಯಾನ್ ನಿಲ್ಲಿಸಲು ಹೋದರೆ ಅಪಾಯ ತಪ್ಪಿದ್ದಲ್ಲ.