ಕಠ್ಮಂಡು: ಮಹಾಕುಂಭಕ್ಕೆ ಬಂದಿದ್ದ ಮೊನಾಲಿಸಾಳ ಅದೃಷ್ಟ ಬದಲಾಗಿದೆ. ಈಗ ಅವರು ದೊಡ್ಡ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಾರೆಯಾದ ಮೊನಾಲಿಸಾ ಅವರ ಪ್ರತಿಯೊಂದು ಚಟುವಟಿಕೆಯ ಮೇಲೆ ನೆಟ್ಟಿಗರು ವಿಶೇಷ ಗಮನ ಇರಿಸಿದ್ದಾರೆ. ಅವರ ಮತ್ತೊಂದು ವಿಡಿಯೋ ಜಾಲತಾಣದಲ್ಲಿ ವೈರಲ್(Video Viral) ಆಗಿದೆ.
ಇದನ್ನು ಓದಿ: ನೀರಿನ ನಲ್ಲಿಯಲ್ಲಿ ಪೈಪ್ ಬೀಳದಂತೆ ಹಾಕುವ ಜುಗಾಡ್ ಟ್ರಿಕ್ ತಿಳಿಸಿದ ಹುಡುಗ; 5 ಕೋಟಿ ಮಂದಿ ಮೆಚ್ಚಿದ Video Viral
ಮೊನಾಲಿಸಾ ತನ್ನ ನೇಪಾಳ ಪ್ರವಾಸದ ಕಾರ್ಯಕ್ರಮದ ಸಮಯದಲ್ಲಿ ಮೈಕ್ ಹಿಡಿದು ವೇದಿಕೆಯಲ್ಲಿ ಮಾತನಾಡುತ್ತಿರುವುದನ್ನು ನೋಡಬಹುದು. ವೈರಲ್ ವಿಡಿಯೋದಲ್ಲಿ ಮೊನಾಲಿಸಾ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ‘ಐ ಲವ್ ಯೂ ನೇಪಾಳ, ನಮಸ್ತೆ.. ಹರ್ ಹರ್ ಮಹಾದೇವ್’ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ. ನಂತರ ತನ್ನ ಸಾಲುಗಳನ್ನು ಮರೆತಿದ್ದರೂ, ವೇದಿಕೆಯಲ್ಲಿದ್ದ ಅತಿಥಿಗಳಿಗೆ ಧನ್ಯವಾದ ಹೇಳುತ್ತಾ ಗಣ್ಯರನ್ನು ಸ್ವಾಗತಿಸುವುದನ್ನು ಕಾಣಬಹುದು.
सही जा रही हो मोनालीसा 🤣🤣🤣 आगे क्या था? pic.twitter.com/0YeAZco9oH
— Mahima Yadav (@SinghKinngSP) March 9, 2025
ಈ 41 ಸೆಕೆಂಡ್ಗಳ ವಿಡಿಯೋವನ್ನು ಇದುವರೆಗೂ 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮೊನಾಲಿಸಾಳ ಖ್ಯಾತಿಯ ಕೀರ್ತಿ ಹೆಚ್ಚಾಗಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಕ್ಕೆ ಸಲ್ಲುತ್ತದೆ. ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಮೊನಾಲಿಸಾ ಹಿಂತಿರುಗಿ ನೋಡಲಿಲ್ಲ. ಬಂದಂತಹ ಅವಕಾಶವನ್ನು ಬಳಸಿಕೊಳ್ಳುತ್ತಾ, ಸನೋಜ್ ಮಿಶ್ರಾ ಅವರ ಚಿತ್ರಕ್ಕೂ ಸಹಿ ಹಾಕಿದರು. ಇದಲ್ಲದೆ ಅವರು ಪ್ರತಿದಿನ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸಿದ್ದಾರೆ.(ಏಜೆನ್ಸೀಸ್)
ಒಂದು ಕೈಯಲ್ಲಿ ಗೇಟ್ ಹಿಡಿದು ಸ್ಕೂಟರ್ ಚಲಾಯಿಸಿದ ಮಹಿಳೆ; ಮುಂದೆ ಆಗಿದ್ದೂ ಮಾತ್ರ ಶೋಚನೀಯ | Viral Video