ಮಹಾಕುಂಭದಲ್ಲಿ ಬದಲಾದ ಈ ಹುಡುಗಿಯ ಅದೃಷ್ಟ; ಮೊನಲಿಸಾ ಡ್ಯಾನ್ಸ್​​ Video Viral

Untitled design (62)
Published on

ಮಹಾ ಕುಂಭಕ್ಕೆ ಬಂದಿದ್ದ ಮೊನಾಲಿಸಾಳ ಅದೃಷ್ಟ ಬದಲಾಗಿದೆ. ಈಗ ಅವರು ದೊಡ್ಡ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಾರೆಯಾದ ಮೊನಾಲಿಸಾ ಅವರ ಪ್ರತಿಯೊಂದು ಚಟುವಟಿಕೆಯ ಮೇಲೆ ನೆಟ್ಟಿಗರು ವಿಶೇಷ ನಿಗಾ ಇರಿಸಿದ್ದಾರೆ. ಸದ್ಯ ಮೊನಲಿಸಾ ಅವರ ಡ್ಯಾನ್ಸ್​ ವಿಡಿಯೋವೊಂದು ವೈರಲ್(Video Viral)​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ಹಿಂದೆ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ತಮ್ಮ ಮುಂದಿನ ಚಿತ್ರ 'ಡೈರಿ ಆಫ್ ಮಣಿಪುರ'ದಲ್ಲಿ ಮೊನಲಿಸಾರನ್ನು ಆಯ್ಕೆ ಮಾಡಿದ್ದರು. ಇದರಿಂದಾಗಿ ಅವರ ಫೋಟೋಗಳು ಮತ್ತು ವಿಡಿಯೋಗಳು ಪ್ರತಿದಿನ ಮುನ್ನೆಲೆಯಲ್ಲಿ ಇರುತ್ತವೆ. ಸದ್ಯ ವೈರಲ್​ ಆಗಿರುವ ಅವರ ಡ್ಯಾನ್ಸ್​ ವಿಡಿಯೋವನ್ನು ಇದುವರೆಗು 1 ಕೋಟಿ 24 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇತ್ತೀಚೆಗಷ್ಟೆ ಮೊನಾಲಿಸಾ ಅವರ ಫೋಟೋಶೂಟ್​ನ ವಿಡಿಯೋ ಕೂಡ ವೈರಲ್ ಆಗಿತ್ತು. ಅದರಲ್ಲಿ ಮೊನಾಲಿಸಾ ಕೆಂಪು ಸೂಟ್ ಮತ್ತು ಕುತ್ತಿಗೆಗೆ ಮುತ್ತಿನ ಹಾರವನ್ನು ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವುದನ್ನು ಕಾಣಬಹುದು. ನೀವು ಅದನ್ನು ಈ ಲಿಂಕ್​ ನಲ್ಲಿ

https://www.instagram.com/reel/DGDFZ38JnZZ/?utm_source=ig_web_copy_link ನೋಡಬಹುದು.

ಮೊನಾಲಿಸಾ ಅವರ ಪೂರ್ಣ ಹೆಸರು ಮೊನಾಲಿಸಾ ಭೋಸ್ಲೆ. ಅವರ ಕುಟುಂಬ ಸದಸ್ಯರು ಅವರನ್ನು ಪ್ರೀತಿಯಿಂದ ಮೋನಿ ಎಂದು ಕರೆಯುತ್ತಾರೆ . 16 ವರ್ಷದ ಮೊನಾಲಿಸಾ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿರುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಪಟ್ಟಣವಾದ ಮಹೇಶ್ವರದ ವಾರ್ಡ್ ಸಂಖ್ಯೆ 9ರ ನಿವಾಸಿಯಾಗಿದ್ದು, ಪಾರ್ಧಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net