ಪ್ರಾಣಿಗಳಿಗೆ ತುಂಬಾ ಒಳ್ಳೆಯ ಸ್ಮರಣೆ ಇರುತ್ತದೆ ಎಂದು ಹೇಳಲಾಗುತ್ತದೆ. ಡಾಲ್ಫಿನ್, ಆನೆ, ಚಿಂಪಾಂಜಿ ಮತ್ತು ಸಿಂಹಗಳಿಗೆ ಉತ್ತಮ ಜ್ಞಾಪಕ ಶಕ್ತಿ ಎಂದು ಪರಿಗಣಿಸಲಾಗಿದೆ. ಸಿಂಹವು ಹಲವು ವರ್ಷಗಳ ಹಿಂದಿನ ವಿಷಯಗಳನ್ನು ಸಹ ನೆನಪಿನಲ್ಲಿಟ್ಟಿರುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೆ(Video Viral) ಅದಕ್ಕೆ ಸಾಕ್ಷಿ. ಈ ಸುಂದರ ಕ್ಷಣವನ್ನು ನೋಡಿದ ನಂತರ ನೀವು ಭಾವುಕರಾಗದೇ ಇರಲಾರಿರಿ.
ಇದನ್ನು ಓದಿ: ಮಾಡೆಲ್ಗಳು ನಾಚುವಂತೆ ಪುಟ್ಟ ಪೋರಿಯ ರ‍್ಯಾಂಪ್ ವಾಕ್, Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..
ವೈರಲ್ ವಿಡಿಯೋದಲ್ಲಿ ಸಿಂಹಿಣಿ ಲಾಂಗ್ ಜಂಪ್ ತೆಗೆದುಕೊಂಡು ಜಿಗಿಯುವುದನ್ನು ನೀವು ನೋಡಬಹುದು. ವಾಸ್ತವವಾಗಿ ಈ ಸಿಂಹಿಣಿ ಮರಿಯಾಗಿದ್ದಾಗ ಅವಳನ್ನು ರಕ್ಷಿಸಿದ ಮತ್ತು ಆರೈಕೆ ಮಾಡಿದ ವ್ಯಕ್ತಿ ಅವಳನ್ನು ಭೇಟಿಯಾಗಲು ಬಂದಿರುತ್ತಾರೆ. ವರ್ಷಗಳ ನಂತರ ತನ್ನನ್ನು ಕಾಪಾಡಿದಾತನನ್ನು ಗುರುತಿಸಿ ಗೇಟ್ ತೆಗೆದ ತಕ್ಷಣವೇ ಆತನ ಮೇಲೆ ಹಾರುತ್ತದೆ. ಮನುಷ್ಯನ ಮಡಿಲಲ್ಲಿ ಧಾವಿಸಿ ಅವನ ಮೇಲೆ ಪ್ರೀತಿ ತೋರುವುದನ್ನು ನೀವು ನೋಡಬಹುದು. ಇದರಿಂದ ಆತ ಸಂತೋಷವಾಗುವುದು ಕಾಣುತ್ತದೆ.
Lion’s reaction to seeing her rescuer, who helped raise her as a cub❤️ pic.twitter.com/NLgQxof7f8
— Nature is Amazing ☘️ (@AMAZlNGNATURE) December 10, 2024
ವೈರಲ್ ಆದ ಒಂದೇ ದಿನದಲ್ಲಿ 11 ಮಿಲಿಯನ್ ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೊ ಭಯಾನಕ ಆದರೆ ಮುದ್ದಾಗಿದೆ0, ತುಂಬಾ ಮುದ್ದಾದ ಮತ್ತು ಸುಂದರವಾದ ವಿಡಿಯೋ, ಹಾರ್ಟ್, ಸ್ಮೈಲ್, ಚಪ್ಪಾಳೆ ತಟ್ಟುವ ಎಮೋಜಿಗಳನ್ನು ಕಳುಹಿಸಿ ಕಾಮೆಂಟ್ ಮಾಡಿದ್ದಾರೆ.
ಸರಸ್ವತಿಗೆ ಮಾಡಿದ ಅಪಮಾನ; ರಾಜಕೀಯ ನಾಯಕರ ವಿರುದ್ಧ ಸಿಟ್ಟಾದ ಸೋನು ನಿಗಮ್ | Sonu Nigam