VIDEO: "ನಮಸ್ಕಾರ ಗೆಳೆಯರೆ.. "- ಕನ್ನಡದಲ್ಲೇ ಜಾಗೃತಿ ಮೂಡಿಸ್ತಿದ್ದಾರೆ ಕ್ರಿಕೆಟ್ ದೇವರು

Sachin Tendulkar
Published on

ಬೆಂಗಳೂರು: ಸಾಮಾನ್ಯವಾಗಿ ಸಚಿನ್​ ತೆಂಡುಲ್ಕರ್ ಮತ್ತು ಅನ್ಯರಾಜ್ಯಗಳ ಇತರೆ ಗಣ್ಯರು ಮಾತನಾಡಿದರೆ ಒಂದೋ ಹಿಂದಿ, ಇಲ್ಲವೇ ಇಂಗ್ಲಿಷ್​ನಲ್ಲಿ ಮಾತನಾಡ್ತಾರೆ. ಇದು ನಮಗೆಲ್ಲಿ ಅರ್ಥ ಆಗಬೇಕು ಅಂದ್ಕೋಬೇಡಿ. ಕೋವಿಡ್ 19 ಸೋಂಕು ತಡೆಯುವ ನಿಟ್ಟಿನಲ್ಲಿ ಜನರನ್ನು ತಲುಪುವ ದೃಷ್ಟಿಯಿಂದ ಬಹಳಷ್ಟು ಬದಲಾವಣೆಗಳಾಗಿವೆ. ಅದ್ರಲ್ಲಿ ಈ ಪ್ರಯತ್ನವೂ ಒಂದು..

"ನಮಸ್ಕಾರ ಗೆಳೆಯರೆ, ಇವತ್ತು ನಾನು ನಿಮ್ಮ ಜತೆಗೆ ಏನೋ ಮಾತನಾಡಬೇಕಿದೆ. ಮೈದಾನಕ್ಕೆ ಇಳಿಯುವ ಮೊದಲು ನಾನು ಯಾವಾಗ್ಲೂ ಪ್ಲೇಯರ್ಸ್​ಗೆ ಹೇಳ್ತಿದ್ದೆ. ನಮ್ಮೆಲ್ಲರ ಮೇಲೆ ಕೋಟ್ಯಂತರ ಜನರ ಭರವಸೆ ನಿಂತಿದೆ..." - ಹೀಗೆ ಕನ್ನಡದಲ್ಲೇ ಕರೊನಾ ಬಗ್ಗೆ, ಕರೊನಾ ವಾರಿಯರ್ಸ್​ ಬಗ್ಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಜಾಗೃತಿ ಮೂಡಿಸಿದ್ದಾರೆ!

ಕರೊನಾ ಯೋಧರ ಬಗ್ಗೆ, ಅವರ ಕಾರ್ಯದ ಬಗ್ಗೆ ಅರಿವು ಮೂಡಿಸಿ ಅವರನ್ನು ಗೌರವದಿಂದ ಕಾಣಬೇಕು ಎನ್ನುವ ಸಂದೇಶವನ್ನು ಸಚಿನ್ ಅವರಿಂದಲೇ ಕೇಳಲು ಮೇಲಿನ ವಿಡಿಯೋ ಕ್ಲಿಕ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net