More

    ಮನೆ ತೊರೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೆರವಾದ ‘ವಿಜಯವಾಣಿ’

    ಕಳಸ: ಪ್ರೀತಿ-ಪ್ರೇಮವೆಂದು ಹೆತ್ತವರಿಂದ ದೂರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದರಿಂದ ತಪ್ಪಿಸಿಕೊಳ್ಳಲಿದ್ದ ವಿದ್ಯಾರ್ಥಿನಿಯೊಬ್ಬಳು ವಿಜಯವಾಣಿ ನೆರವಿನಿಂದ ಇಂದು ಪರೀಕ್ಷೆ ಬರೆದಿದ್ದಾಳೆ. ಆ ಮೂಲಕ ತಂದೆಗೆ ಕೊಟ್ಟ ಮಾತನ್ನೂ ಉಳಿಸಿಕೊಂಡಿದ್ದಾಳೆ.

    ಸ್ಥಳೀಯ ಸಂಸ್ಥೆಯೊಂದರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದಳು. ಈ ಬಗ್ಗೆ ಕುದುರೆಮುಖ ಪೊಲೀಸ್​ ಠಾಣೆಗೆ ಬಾಲಕಿ ತಂದೆ ದೂರು ನೀಡಿದ್ದರು. ಕರೊನಾ ಕಾರಣದಿಂದ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ವಿಜಯವಾಣಿ ವರದಿಗಾರನನ್ನು ಸಂಪರ್ಕಿಸಿದ ಬಾಲಕಿಯ ತಂದೆ, ಬದುಕಿಗೆ ಶಿಕ್ಷಣ ಅಗತ್ಯ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮಗಳು ಬಂದರೆ ಸಾಕು. ಪ್ರಾಪ್ತಳಾದ ನಂತರ ಅವಳು ಬಯಸಿದ ಹುಡುಗನೊಂದಿಗೆ ಮದುವೆ ಮಾಡಲು ಸಿದ್ಧನಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು.

    ಇದನ್ನೂ ಓದಿರಿ video/ ರೈಲ್ವೆ ಬ್ಯಾರಿಕೇಡ್​ಗೆ ಹೊಟ್ಟೆ ಸಿಲುಕಿಸಿಕೊಂಡು ಒದ್ದಾಡಿದ ಆನೆ

    ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಪೊಲೀಸರು ವಿದ್ಯಾರ್ಥಿನಿಯನ್ನು ಪತ್ತೆ ಮಾಡಿ ಕರೆತಂದಿದ್ದರು. ಮನವೊಲಿಕೆ ನಂತರ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತೇನೆ ಎಂದು ತಂದೆಗೆ ಮಾತು ಕೊಟ್ಟಿದ್ದಳು.

    ಪಾಲಕರ ಮತ್ತು ವಿದ್ಯಾರ್ಥಿನಿ ಅಪೇಕ್ಷೆಯಂತೆ ಪರೀಕ್ಷೆ ಬರೆಯಲು ಅನುಮತಿ ಪತ್ರವನ್ನೂ ಕೊಡಲಾಗಿತ್ತು. ಆದರೆ, ಗುರುವಾರ ಪರೀಕ್ಷಾ ದಿನ 9.45ರ ವರೆಗೂ ಈ ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಗೆ ಬಾರದಿರುವ ಮಾಹಿತಿ ತಿಳಿದ ವಿಜಯವಾಣಿ, ಕೂಡಲೇ ಅವಳ ಪಾಲಕರನ್ನು ಸಂಪರ್ಕಿಸಿತ್ತಾದರೂ ಅವರು ಸಿಗಲಿಲ್ಲ.

    ಬೇರೆ ಕಡೆಯಿಂದ ವಿಚಾರ ಮಾಡಿದಾಗ ಅವರು ಈ ಹಿಂದೆ ವಾಸವಾಗಿದ್ದ ತೋಟವನ್ನು ತೊರೆದು ಕಳಸದಿಂದ 15 ಕಿ.ಮೀ. ದೂರ ಇರುವ ಎಸ್ಟೇಟ್​ವೊಂದರಲ್ಲಿ ವಾಸವಾಗಿರುವ ಮಾಹಿತಿ ತಿಳಿಯಿತು. ನಂತರ ಜೆಇಎಂ ಶಾಲಾ ಶಿಕ್ಷಕ ಪ್ರಶಾಂತ್​ ಮತ್ತು ಮರಸಣಿಗೆಯ ವಿಜಯವಾಣಿ ಪತ್ರಿಕೆ ವಿತರಕ ವಿಶ್ವನಾಥ್​ ಅವರ ನೆರವು ಪಡೆದು ವಿದ್ಯಾರ್ಥಿನಿಯ ಮನವೊಲಿಸಿ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. 10.45ಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು.

    ಕಿರುಕುಳಕ್ಕೆ ಬೇಸತ್ತ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಗೃಹ ಕಚೇರಿ ಮುಂದೆ ಧರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts