More

    VIDEO|ಸೈಂಟಿಫಿಕ್ ಫಿಕ್ಷನ್ ಸಿನಿಮಾದ ನಾಯಕಿ: ಈಕೆ ಜಗತ್ತಿನ ಮೊದಲ ಎಐ ಆರ್ಟಿಸ್ಟ್​!

    ಬರೋಬ್ಬರಿ 524 ಕೋಟಿ ರೂಪಾಯಿ ಪ್ರೀ ಪ್ರೊಡಕ್ಷನ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ “ಬಿ” ಎಂಬ ಸೈಂಟಿಫಿಕ್ ಫಿಕ್ಷನ್ ಮೂವಿಯ ನಾಯಕಿ ಈಕೆ. ಇತರೆ ಸಿನಿಮಾ ನಟಿಯರಂತೆ ಈಕೆಗೆ ಕೋವಿಡ್​ 19 ಸೋಂಕಿನ ಭಯವೂ ಈಕೆಗಿಲ್ಲವಂತೆ. ಆದರೆ, ಇತರೆ ನಟಿಯರಂತೆ ಮನುಷ್ಯ ಜೀವಿತದ ಅನುಭವ ಇಲ್ಲವೇ ಇಲ್ಲ. ನಟನೆ ಮೊದಲೇ ಗೊತ್ತೇ ಇಲ್ಲ. ಆದರೂ ಈಕೆ ಈ ಸಿನಿಮಾಕ್ಕೆ ನಾಯಕಿ. ಹೆಸರು ಎರಿಕಾ. ಇದು ಈಕೆಯ ಚೊಚ್ಚಲ ಸಿನಿಮಾ. ಜಗತ್ತಿನ ಮೊದಲ ಎಐ ಆರ್ಟಿಸ್ಟ್ ಎಂಬ ಕೀರ್ತಿಯೂ ಈಕೆಯದ್ದು.

    ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​(ಎಐ) ಸದ್ಯ ಜಗತ್ತಿನ ಹಾಟ್ ಟಾಪಿಕ್​. ಪತ್ರಿಕೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಐ ಈಗಾಗಲೇ ತನ್ನ ಛಾಪು ಮೂಡಿಸಿದೆ. ಹ್ಯೂಮನಾಯ್ಡ್ ನ್ಯೂಸ್​ ರೀಡರ್ ಟಿವಿ ಚಾನೆಲ್​ನಲ್ಲಿ ಕುಳಿತು ಸುದ್ದಿ ಓದಿದ್ದೂ ಆಗಿದೆ. ಈಗ ಸಿನಿಮಾ ಸರದಿ! ಹ್ಯೂಮನಾಯ್ಡ್ ಎರಿಕಾ ಈಗ ಜಗತ್ತಿನ ಗಮನಸೆಳೆದಿದ್ದಾಳೆ. ಜಪಾನಿನ ಸೈಂಟಿಸ್ಟ್​ಗಳಾದ ಹಿರೋಶಿ ಇಷಿಗುರೊ ಮತ್ತು ಕೊಹೇಯಿ ಒಗವಾ ಇಬ್ಬರು ಸೇರಿ ಇವಳನ್ನು ರೂಪಿಸಿದ್ದಾರೆ.

    ಆಂಡ್ರಾಯ್ಡ್​ ಹ್ಯೂಮನಾಯ್ಡ್​: ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಎಂದರೆ ಎಲ್ಲರಿಗೂ ಆಂಡ್ರಾಯ್ಡ್​ ಫೋನ್​ಗಳು ನೆನಪಿಗೆ ಬರುತ್ತವೆ. ಆದರೆ, ಎರಿಕಾ ಎಂಬ ಈ ಹ್ಯೂಮನಾಯ್ಡ್ ಕೂಡ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕವೇ ಕಾರ್ಯಾಚರಿಸುತ್ತಿರುವುದು ವಿಶೇಷ.

    ಅದೊಮ್ಮೆ ಎರಿಕ್ ಫಾಮ್​, ತಾರೇಕ್​ ಝೋಡಿ, ಸ್ಯಾಮ್​ ಖೋಝೆ ಎಂಬುವವರ ಕಣ್ಣಿಗೆ ಬಿದ್ದಳು ಈ ಎರಿಕಾ. ಈ ಮೂವರು ಬೇರಾರೂ ಅಲ್ಲ – ಸದ್ಯ ಸಿದ್ಧವಾಗುತ್ತಿರುವ ಸೈಂಟಿಫಿಕ್​ ಫಿಕ್ಷನ್ ಮೂವಿ “ಬಿ”ಯ ಕಥೆಯನ್ನು ಹೆಣೆದವರು.

    ಇದನ್ನೂ ಓದಿ: ಅಕ್ಷಯ್​ ಕುಮಾರ್​ಗೂ ಎದುರಾಗಿತ್ತು ನೆಪೋಟಿಸಂ; ಸಿನಿಮಾ ಅವಕಾಶ ಕಿತ್ತುಕೊಂಡಿದ್ದರು ಈ ಸ್ಟಾರ್ ನಟ!

    ಹಾಲಿವುಡ್ ರಿಪೋರ್ಟರ್ ವರದಿ ಪ್ರಕಾರ, ಎರಿಕಾಗೆ ಮನುಷ್ಯ ಜೀವಿತದ ಅನುಭವ ಇಲ್ಲ. ಈ ಪಾತ್ರದಲ್ಲಿ ನಟಿಸುವ ವಿಷಯದಲ್ಲಿ ಈಕೆಯದ್ದು ಶೂನ್ಯ ಅನುಭವ. ಎಲ್ಲವನ್ನೂ ಆರಂಭದಿಂದಲೇ ಹೇಳಿಕೊಡಬೇಕಾಗುತ್ತದೆ. ಪ್ರತಿಯೊಂದು ಸನ್ನಿವೇಶವನ್ನು ವಿವರಿಸಿ, ಭಾಷೆಯನ್ನೂ, ಬಾಡಿ ಲಾಂಗ್ವೇಜನ್ನೂ ತಿದ್ದಿಕೊಂಡು ಸಿನಿಮಾ ನಿರ್ಮಿಸುತ್ತೇವೆ.ಸಿನಿಮಾದ ಪ್ರೀ ಪ್ರೊಡಕ್ಷನ್ ವೆಚ್ಚವೇ 524 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಖೋಝೆ ಹೇಳಿದ್ದಾರೆ.

    ಇದು ಕಥೆಯ ಎಳೆ: ಮಾನವರ ಡಿಎನ್​ಎಯನ್ನು ಪರಿಪೂರ್ಣಗೊಳಿಸುವ ಪ್ರೋಗ್ರಾಂ ಒಂದನ್ನು ಬರೆದ ಸೈಂಟಿಸ್ಟ್​ಗೆ ಅದರಲ್ಲಿ ಬಹಳಷ್ಟು ಅಪಾಯಗಳು ಇರುವುದು ಗೊತ್ತಾಗುತ್ತದೆ. ಆಗ ಸೈಂಟಿಸ್ಟ್​ ಈ ಅಪಾಯದಿಂದ ಪಾರಾಗಲು ಎಐ ಮಹಿಳೆ (ಎರಿಕಾ)ಯ ನೆರವು ಪಡೆಯುತ್ತಾನೆ. ಅದು ಹೇಗೆ ಏನು ಎಂಬುದೇ ಕಥಾ ಹಂದರ.

    ಸಿನಿಮಾದಲ್ಲಿನ ಇತರೆ ಪಾತ್ರಗಳನ್ನು ಯಾರು ನಿರ್ವಹಿಸುತ್ತಾರೆ ಎಂಬುದು ಬಹಿರಂಗವಾಗಿಲ್ಲ. ಸಿನಿಮಾ ನಿರ್ಮಾಣ ಕಾರ್ಯ 2021ರಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಶೂಟಿಂಗ್ ಇನ್ನೂ ಶುರುವಾಗಿಲ್ಲ, ಟ್ರೇಯ್ಲರ್​ ಕೂಡ ಬಹಿರಂಗವಾಗಿಲ್ಲ. ಆದಾಗ್ಯೂ, ಎರಿಕಾ ಜತೆಗಿನ ಮಾತುಕತೆಯ ವಿಡಿಯೋ ಅನಾವರಣಗೊಂಡಿದೆ!

    ಬಲವಾದ ಕಾರಣ ಹೊತ್ತು ನಾಡಿನ ಅಭಿಮಾನಿಗಳನ್ನು ಭೇಟಿ ಮಾಡಲು ಬರುತ್ತಿದ್ದಾರೆ ಕಿಚ್ಚ ಸುದೀಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts