More

    VIDEO | ರಜನೀಕಾಂತ್​ ಅನುಕರಣೆಯ ಫ್ಲಾಪ್ ಶೋ!

    ಚೆನ್ನೈ : ಸೂಪರ್​ ಸ್ಟಾರ್​ ರಜನೀಕಾಂತ್ ತರಹ ಕಾಣುವ ಹಲವು ಮಿಮಿಕ್ರಿ ಕಲಾವಿದರು ಪುಟ್ಟ ಊರುಗಳಲ್ಲಿ ಜನರನ್ನು ರಂಜಿಸುವ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಇಂಥದೇ ಒಬ್ಬ ಕಲಾವಿದ ರಜನೀಕಾಂತ್​ರ ಕೆಲವು ಸಿಗ್ನೇಚರ್​ ಸ್ಟೈಲ್​ಗಳನ್ನು ವೇದಿಕೆಯ ಮೇಲೆ ಅನುಕರಿಸುತ್ತಾ ನಗೆಪಾಟಲಾಗಿರುವ ವಿಡಿಯೋವೊಂದು ವೈರಲ್ ಆಗಿದೆ.

    ವಿವಾಹ ಅಥವಾ ಮತ್ತಾವುದೋ ಸಮಾರಂಭದಲ್ಲಿ ಪುಟ್ಟ ವೇದಿಕೆಯಲ್ಲಿ ‘ತಲೈವ’ ಶೈಲಿಯಲ್ಲಿ ಡ್ರೆಸ್​ ಮಾಡಿಕೊಂಡಿರುವ ಕಲಾವಿದ, ತೆರೆಯ ಮೇಲೆ ರಜನೀ ಅವರು ನಿರಾಯಾಸವಾಗಿ ಮಾಡುವ ಸ್ಟಂಟ್​ ಒಂದನ್ನು ಮಾಡಲು ಪ್ರಯತ್ನಿಸಿದ್ದಾನೆ. ರಜನೀಕಾಂತ್​ ನಡೆಯುವ, ನಗುವ ರೀತಿಯನ್ನು ಚೆನ್ನಾಗಿ ಅನುಕರಿಸುತ್ತಾ, ಕುರ್ಚಿಯೊಂದಕ್ಕೆ ಕಾಲಿನಿಂದ ಒದ್ದಾಗ, ಆ ಪ್ಲಾಸ್ಟಿಕ್ ಕುರ್ಚಿಯಲ್ಲಿ ತೂತಾಗಿ ಅವನ ಕಾಲು ಸಿಕ್ಕಿಹಾಕಿಕೊಂಡಿದೆ. ಆತ ಆಯ ತಪ್ಪಿ ಬೆನ್ನ ಮೇಲೆ ಧೊಪ್ಪೆಂದು ಬಿದ್ದಿದ್ದಾನೆ, ಪಾಪ!

    ನಂತರ ಸಹಾಯಕರು ಅವನ ಕಾಲಿನಿಂದ ಕುರ್ಚಿಯನ್ನು ಹೊರಕ್ಕೆಳೆಯುವ ಪ್ರಯತ್ನ ಮಾಡುವುದೂ ವಿಡಿಯೋದಲ್ಲಿ ದಾಖಲಾಗಿದೆ. ನಿರಂಜನ್​ ಮಹಾಪಾತ್ರ ಎಂಬುವರು ಈ ವಿಡಿಯೋ ತುಣುಕನ್ನು ಇನ್ಸ್​ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಕಳೆದ ಕೆಲವು ದಿನಗಳಿಂದ ಇದು ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)

    ಆಗ ಲ್ಯಾಂಬೋರ್ಗಿನಿ ಈಗ ಮರ್ಸಿಡಿಸ್​! ನಟ ರಣವೀರ್​ ಸಿಂಗ್​ರ ಹೊಸ ಕಾರು ನೋಡಿ

    VIDEO | ಕ್ಯಾಪ್ಟನ್​ ಕೂಲ್​ ಧೋನಿ ಬರ್ತ್​​ಡೇಗೆ ಐಸಿಸಿ ವಿಶೇಷ ಕೊಡುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts