ಆಗ ಲ್ಯಾಂಬೋರ್ಗಿನಿ ಈಗ ಮರ್ಸಿಡಿಸ್​! ನಟ ರಣವೀರ್​ ಸಿಂಗ್​ರ ಹೊಸ ಕಾರು ನೋಡಿ

ranveer
Published on

ಮುಂಬೈ : ಬಾಲಿವುಡ್ ನಟ ರಣವೀರ್​ ಸಿಂಗ್​ ಅವರಿಗೆ ಸಂಭ್ರಮದ ಮೇಲೆ ಸಂಭ್ರಮ! ಏಕೆ ಗೊತ್ತೆ? ಕಳೆದ ಮೇನಲ್ಲಷ್ಟೇ ಲ್ಯಾಂಬೋರ್ಗಿನಿಯ ವಿಶೇಷ ಮಾಡೆಲ್​ ಕಾರು ಖರೀದಿಸಿದ್ದ ರಣವೀರ್​, ಇದೀಗ ಮರ್ಸಿಡಿಸ್​ನ ಲೇಟೆಸ್ಟ್​ ಮಾಡೆಲ್​ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿನ್ನೆಯ ದಿನ ತಮ್ಮ 36ನೇ ಜನ್ಮದಿನ ಆಚರಿಸಿಕೊಂಡ ರಣವೀರ್​ ಅತ್ಯಂತ ದುಬಾರಿಯಾಗಿರುವ ಎಸ್​​ಯುವಿಗಳಲ್ಲೊಂದಾದ ಮರ್ಸಿಡಿಸ್​ ಮೇಬಚ್ ಜಿಎಲ್​ಎಸ್​ 600 ಕಾರಿನ ಒಡೆಯರಾಗಿದ್ದಾರೆ. ಈ ಕಾರಿನೊಂದಿಗಿನ ಅವರ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಕಳೆದ ತಿಂಗಳಷ್ಟೇ 2.43 ಕೋಟಿ ರೂ. ಬೆಲೆಗೆ ಲಾಂಚ್​ ಆದ ಕಾರಿದು.

ಇನ್ನು ಇದೇ ವರ್ಷ ಮೇ ತಿಂಗಳಲ್ಲಿ ಅವರು ಲ್ಯಾಂಬೋರ್ಗಿನಿ ಉರುಸ್ ಪರ್ಲ್​ ಕ್ಯಾಪ್ಸೂಲ್​​ನ ಡಿಸೈನ್ ಎಡಿಶನ್​ನ ಡೆಲಿವರಿ ಪಡೆದಿದ್ದರು. ಮಾರ್ಚ್​ನಲ್ಲಿ ಲಾಂಚ್​ ಆದ ಪರ್ಲ್​ ಕ್ಯಾಪ್ಸೂಲ್ ಕಾರಿನ ಸ್ಟಾಂಡರ್ಡ್​ ಮಾಡೆಲ್​ಗೇ 3.15 ಕೋಟಿ ರೂ.ಗಳಷ್ಟು ಶೋರೂಂ ಬೆಲೆ ಇದ್ದರೆ, ಡಿಸೈನ್ ಎಡಿಷನ್​ಗೆ ಅದಕ್ಕಿಂತ ಶೇ.20 ರಷ್ಟು ಹೆಚ್ಚು ಬೆಲೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net