VIDEO| 'ಮುಗಿಲ್​ಪೇಟೆ' ಚಿತ್ರದಲ್ಲಿ 'ಪ್ರೇಮಲೋಕ'ದ ರಸಮಯ ದೃಶ್ಯ!

mugilpete
Published on

ಬೆಂಗಳೂರು: ದಶಕಗಳ ಹಿಂದೆ ಬಂದ ಪ್ರೇಮಲೋಕ ಚಿತ್ರದಲ್ಲಿ ಕ್ರೇಜಿ ಸ್ಟಾರ್​ ರವಿಚಂದ್ರನ್​ ಅವರ ನಟನೆಯ ಪ್ರೀತಿಪ್ರಣಯದ ರಸವತ್ತಾದ ದೃಶ್ಯಗಳು ಯುವಜನರ ಮನ ಸೆಳೆದಿದ್ದವು. ಇದೀಗ ಅವರ ಮಗ ಮನೋರಂಜನ್ ನಾಯಕತ್ವದ 'ಮುಗಿಲ್​ಪೇಟೆ' ಎಂಬ ಪ್ರೇಮಚಿತ್ರದಲ್ಲಿ ಅದೇ ರೀತಿಯ ಜಾದೂ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮುಗಿಲ್​ಪೇಟೆ ಚಿತ್ರದ 'ತಾರೀಫು ಮಾಡಲು ತಾರೀಕು ಮೂಡಿದೆ...' ಹಾಡಿನ ವಿಡಿಯೋವನ್ನು ಲಹರಿ ಮ್ಯೂಸಿಕ್​ನವರು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆ ಚಿತ್ರಗೀತೆಗೆ 24 ಗಂಟೆಗಳಲ್ಲಿ 700 ಸಾವಿರ ಪ್ಲಸ್​ ವೀಕ್ಷಣೆಗಳು ಲಭಿಸಿದ್ದು, ಎರಡನೇ ದಿನದಲ್ಲೇ ಒಂದು ಮಿಲಿಯನ್​ ವೀಕ್ಷಣೆಗಳ ಮಟ್ಟವನ್ನು ದಾಟಿತ್ತು. ಇದೂ ಸೇರಿದಂತೆ, ಚಿತ್ರದ ಎಲ್ಲಾ ಅಪ್ಡೇಟ್​ಗಳನ್ನೂ ಮನೋರಂಜನ್​ ನಿಯಮಿತವಾಗಿ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡುತ್ತಾ ಬಂದಿದ್ದಾರೆ.

ಇದೀಗ ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಶವನ್ನು ಟ್ವಿಟರ್​ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜೂಹಿ ಚಾವ್ಲಾ ನಡುವಿನ ಇಂಟಿಮೇಟ್​ ಸೀನ್​ನ ತುಣುಕನ್ನು 'ಮುಗಿಲ್​ಪೇಟೆ' ಚಿತ್ರದಲ್ಲಿ ರೀಕ್ರಿಯೇಟ್​ ಮಾಡಲಾಗಿದೆ. ಅಪ್ಪ ನಟಿಸಿದ ದೃಶ್ಯಕ್ಕೇ ಮಗ ಮನೋರಂಜನ್​ ಕೂಡ ಅಭಿನಯಿಸಿದ್ದು, ಈ ಎರಡೂ ದೃಶ್ಯಗಳ ಜಂಟಿ ವಿಡಿಯೋವನ್ನು ರಿಲೀಸ್​ ಮಾಡಿದ್ದಾರೆ. ಅದರ ಬಗ್ಗೆ ಅಭಿಮಾನಿಗಳ ಅಭಿಪ್ರಾಯಗಳನ್ನು ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net