

ಬೆಂಗಳೂರು: ಡಿಜೆಹಳ್ಳಿಯಲ್ಲಿ ಗಲಭೆ, ಹಿಂಸಾಚಾರ ನಡೆಸಿದ ಆರೋಪದಲ್ಲಿ ಬಂಧಿತರಾದವರು ಅಮಾಯಕರು, ಸತ್ತವರು ಹುತಾತ್ಮರು ಎಂದು ಬುರ್ಖಾಧಾರಿ ಮಹಿಳೆಯರು ಪುಂಡರ ದುಷ್ಕೃತ್ಯ ಸಮರ್ಥಿಸಿಕೊಂಡ ವಿಡಿಯೋ ವೈರಲ್ ಆಗಿದೆ.
ಯಾರು ಈ ಗಲಭೆಗೆ ಕಾರಣರಾದವರೋ ಅವರನ್ನು ಕೂಡಲೆ ಬಂಧಿಸಿ. ಇಷ್ಟೆಲ್ಲ ರಾದ್ಧಾಂತ ಆಗುವುದಕ್ಕೆ ಪೊಲೀಸರೇ ಕಾರಣ. ಗಲಭೆ ನಡೆದು ಐದು ದಿನ ಆಯಿತು. ಫೇಸ್ಬುಕ್ ಪೋಸ್ಟ್ ಹಾಕಿದಾತನನ್ನು ಪೊಲೀಸರು ಕೂಡಲೆ ಬಂಧಿಸಿದ್ದರೆ ಈ ಗಲಭೆ ನಡೆಯುತ್ತಲೇ ಇರಲಿಲ್ಲ ಎಂದು ಬುರ್ಖಾಧಾರಿ ಮಹಿಳೆಯರು ಪೊಲೀಸರನ್ನೇ ಈ ಗಲಭೆಗೆ ಹೊಣೆಗಾರರನ್ನಾಗಿ ಮಾಡಿದ್ದು ಕಂಡುಬಂದಿದೆ. (ದಿಗ್ವಿಜಯ ನ್ಯೂಸ್)