More

    video/ ಡಿಜೆ ಹಳ್ಳಿ ಗಲಭೆ; ಪೊಲೀಸ್​ ಆಯುಕ್ತರನ್ನು ಮೌಲ್ವಿಗಳು ಭೇಟಿ ಮಾಡಿದ್ದೇಕೆ?

    ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಮೌಲ್ವಿಗಳು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

    ಪೊಲೀಸರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ನಮ್ಮ ಸಮುದಾಯದವರಿಗೆ ಕಳಿಸುತ್ತಿದ್ದೇವೆ. 28 ಜಿಲ್ಲೆಗಳಲ್ಲಿ ನಮ್ಮ ಸಂಘಟನೆಗಳಿದ್ದು, ಎಲ್ಲೂ ಪ್ರತಿಭಟನೆ ಮಾಡಲಿಲ್ಲ. ಗಲಭೆ ನಡೆದ ಪ್ರದೇಶದಲ್ಲಿ ಕರ್ಫ್ಯೂ ಬಗ್ಗೆ ಜನ ಭಯಭೀತರಾಗಿದ್ದಾರೆ. ಕರ್ಫ್ಯೂ ತೆಗೆಯಿರಿ ಎಂದ ಮೌಲ್ವಿಗಳು, ಒಂದು ವೇಳೆ ಕರ್ಫ್ಯೂ ತೆಗೆಯದಿದ್ದರೆ ಜನ ನಜೀವನ ಮಾಡಲು ಕಷ್ಟವಾಗಿ ಬೀದಿಗೆ ಇಳಿದ್ರೆ ನಾವು ಜವಾಬ್ದಾರಲ್ಲ ಎಂದು ಪೊಲೀಸ್​ ಆಯುಕ್ತರಿಗೆ ಎಚ್ಚರಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿರಿ ಡಿಜೆ ಹಳ್ಳಿ ಗಲಭೆಯ ರೂವಾರಿ ಪತ್ತೆಗೆ ಸುಳಿವು ಕೊಟ್ಟ ಮೊಬೈಲ್​ ರಿಂಗ್​ಟೋನ್​!

    ಶುಕ್ರವಾರದ ಪ್ರಾರ್ಥನೆಯಲ್ಲಿ ಗಲಾಟೆಯ ಬಗ್ಗೆ ಯಾವುದೇ ಚರ್ಚೆಗಳು ನಡೆಯುವುದಿಲ್ಲ. ಆದ್ದರಿಂದ ಸದ್ಯ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಜಾರಿಯಲ್ಲಿರುವ ಕರ್ಫ್ಯೂನ್ನು ತೆಗೆಯಿರಿ ಎಂದು ಮೌಲ್ವಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಗಲಭೆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಶಾಂತಿ ಸಭೆಗಳು ಮಾಡುತ್ತಿದ್ದೇವೆ. ಪ್ರಕರಣವು ತನಿಖಾ ಹಂತದಲ್ಲಿರುವ ಕಾರಣ ಸದ್ಯ ಕೆಲ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದರು.

    ಪೊಲೀಸ್ ಆಯುಕ್ತರಿಗೆ ಮೌಲ್ವಿಗಳಿಂದ ವಾರ್ನಿಂಗ್ | Maulvi's warns to police commissioner

    ಪೊಲೀಸ್ ಆಯುಕ್ತರಿಗೆ ಮೌಲ್ವಿಗಳಿಂದ ವಾರ್ನಿಂಗ್#Maulvi #Warns #PoliceCommissioner #DJHalliViolence #Bengaluru

    Posted by Dighvijay News – ದಿಗ್ವಿಜಯ ನ್ಯೂಸ್ on Wednesday, August 19, 2020

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಡಿಜೆ ಹಳ್ಳಿ ಗಲಭೆಯ 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಚಟುವಟಿಕೆ ಲಿಂಕ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts