ಯಪ್ಪಾ…ವೀವ್ಸ್​​​​​ಗೋಸ್ಕರ ಹೀಗೂ ಮಾಡ್ತರಾ…ನಿರ್ಜನ ಬೀದಿಯಲ್ಲಿ ಲಿಪ್ ಲಾಕ್ ಮಾಡಿದ ಯುವತಿಯರು; ವಿಡಿಯೋ ವೈರಲ್

girl video
Published on

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಸಲುವಾಗಿ ಅನೇಕ ಜನರು ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋಗಳನ್ನು ವೀಕ್ಷಿಸಿದ ನಂತರ, ಎಲ್ಲಾ ಜನರು ವೀಕ್ಷಣೆ (Views) ಗಾಗಿ ಏನೆಲ್ಲಾ ಮಾಡುತ್ತಿದ್ದಾರೆಂದು ಜನರಿಗೆ ಆಶ್ಚರ್ಯವಾಗುತ್ತದೆ. ಹೌದು, ತಮ್ಮ ರೊಮ್ಯಾಂಟಿಕ್ ಕ್ಷಣಗಳನ್ನು ಸಹ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​​ ಮಾಡುತ್ತಿರುವುದುನ್ನು ನೀವು ನೋಡಿರಬಹುದು.
ನಿಮ್ಮ ಪ್ರೀತಿಯನ್ನು ಜನರ ಮುಂದೆ ತೋರಿಸುವುದು ಅಗತ್ಯವೇ ಅಥವಾ ಈ ಎಲ್ಲಾ ಕೆಲಸಗಳನ್ನು ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆ, ಲೈಕ್ಸ್ ಮತ್ತು ಅನುಯಾಯಿಗಳನ್ನು ಹೆಚ್ಚಿಸುವ ಸಾಧನವೇ ತಿಳಿಯುತ್ತಿಲ್ಲ.

ಬೀದಿಯಲ್ಲಿ ರೋಮ್ಯಾನ್ಸ್
ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಹುಡುಗಿಯರು ತಮ್ಮ ವೈಯಕ್ತಿಕ ಕ್ಷಣಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ನಿರ್ಜನ ರಸ್ತೆಯಲ್ಲಿ ಇಬ್ಬರು ಹುಡುಗಿಯರು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ, ಇಬ್ಬರೂ ತುಂಬಾ ರೋಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ಹುಡುಗಿ ಸೀರೆ ಉಟ್ಟಿದ್ದಾಳೆ ಮತ್ತು ಇನ್ನೊಬ್ಬಳು ಸ್ಕಾರ್ಫ್ ಮತ್ತು ಲೋವರ್ ಧರಿಸಿದ್ದಾಳೆ. ತನ್ನ ಗೆಳತಿಯನ್ನು ಕರೆದುಕೊಂಡು ಗೋಡೆಯ ಬಳಿ ಲಿಪ್ ಲಾಕ್ ಮಾಡುತ್ತಿದ್ದಾಳೆ. ಇದಾದ ನಂತರ ನೃತ್ಯ ಮಾಡಿ, ಅವಳು ಮತ್ತೊಮ್ಮೆ ಬೀದಿಯಲ್ಲಿ ರೋಮ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾಳೆ.

ವಿಡಿಯೋ ನೋಡಿದ ಜನ ಪ್ರತಿಕ್ರಿಯಿಸಿದ್ದು ಹೀಗೆ...
ಪೂರ್ತಿ ವಿಡಿಯೋ ನೋಡಿದ ಮೇಲೆ ಈ ಹುಡುಗಿಯರು ಫೋಟೋಶೂಟ್ ಮಾಡ್ತಿದ್ದಾರೆ ಅಂತ ಗೊತ್ತಾಗುತ್ತೆ. ಈ ವಿಡಿಯೋವನ್ನು ಪ್ರಿಯಾಂಕಾ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಜನರು ಈ ವಿಡಿಯೋ ಸಾಕಷ್ಟು ಶೇರ್ ಮಾಡುತ್ತಿದ್ದಾರೆ.
ಈ ವಿಡಿಯೋ ಬರೆಯುವವರೆಗೂ 5 ಲಕ್ಷ ಮಂದಿ ವೀಕ್ಷಿಸಿದ್ದು, 6 ಸಾವಿರ ಮಂದಿ ಲೈಕ್ಸ್​​ ಮಾಡಿದ್ದಾರೆ. ಅನೇಕ ಜನರು ವಿಡಿಯೋಗೆ ಇಲ್ಲಸಲ್ಲದ ಕಾಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರರು, "ಇದರಿಂದ ಹುಡುಗರಿಗೆ ಮೋಸವಾಗಿದೆ, ಓ ದೇವರೇ...ಯಾರಾದರೂ ದಯವಿಟ್ಟು ಅವರಿಗೆ ವಿವರಿಸಿ, ಇನ್ನು ಏನೇನೂ ನೋಡಬೇಕೋ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಆದರೆ ಬಹುತೇಕರು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆ (Views) ಮತ್ತು ಲೈಕ್ಸ್ ಪಡೆಯಲು ಈ ಜನರು ಯಾವುದೇ ಮಟ್ಟಿಗಾದರೂ ಇಳಿಯಬಹುದು ಎಂದು ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net