More

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

    ನವದೆಹಲಿ: ಭಾರತದ ಮೊದಲ ಅಮೃತ್ ಭಾರತ್ ರೈಲು (Amrit Bharat Express) ಇಂದು ಅಯೋಧ್ಯೆಯಿಂದ ದೆಹಲಿಗೆ ಹೊರಟಿದೆ. ವಂದೇ ಭಾರತ್ ರೈಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಇದು ದೇಶದ ಮೊದಲ ಪುಲ್-ಪುಶ್ ರೈಲು ಆಗಿದ್ದು, ಇದು ಎರಡು ಎಂಜಿನ್‌ಗಳನ್ನು ಹೊಂದಿರುತ್ತದೆ. ಇದರಲ್ಲಿ, ಎರಡನೇ ಎಂಜಿನ್ ರೈಲಿನ ಕೊನೆಯ ಕೋಚ್ ನಂತರ ಇರುತ್ತದೆ.

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

    ಅಮೃತ್ ಭಾರತ್ ರೈಲಿಗೆ ವೇಗ ನೀಡಲು ಎರಡು ಎಂಜಿನ್ ಅಳವಡಿಸಲಾಗಿದೆ. ಈ ರೈಲು 130 ಕಿ.ಮೀ ವೇಗದಲ್ಲಿ ಹಳಿಗಳ ಮೇಲೆ ಚಲಿಸಲಿದೆ. ವರದಿಗಳ ಪ್ರಕಾರ, ಪ್ರತಿ ತಿಂಗಳು 20 ರಿಂದ 30 ಅಮೃತ್ ಭಾರತ್ ರೈಲುಗಳು ಓಡಲಿವೆ.

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

    ಅಮೃತ್ ಭಾರತ್ ರೈಲಿನ ಒಳಭಾಗವು ತುಂಬಾ ವಿಶೇಷವಾಗಿದೆ. ಅಮೃತ್ ಭಾರತ್ ನಾನ್ ಎಸಿ ರೈಲಾಗಿದ್ದರೆ, ವಂದೇ ಭಾರತ್ ರೈಲು ಸಂಪೂರ್ಣ ಎಸಿ ರೈಲು. ರೈಲಿನ ಕೋಚ್ ಸಂಪೂರ್ಣವಾಗಿ ಗಾಜಿನಿಂದ ಮುಚ್ಚಲ್ಪಟ್ಟಿದೆ.

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

    ರೈಲಿನಲ್ಲಿ ಸಾಮಾನುಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶವಿದೆ. ಇದರ ಆಸನಗಳು ತುಂಬಾ ಆರಾಮದಾಯಕವಾಗಿದ್ದು, ದೂರದ ಪ್ರಯಾಣದಲ್ಲೂ ಜನರು ಸುಸ್ತಾಗದ ರೀತಿಯಲ್ಲಿ ರೈಲನ್ನು ವಿನ್ಯಾಸಗೊಳಿಸಲಾಗಿದೆ.

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

    ಅಮೃತ್ ಭಾರತ್ ರೈಲುಗಳು ಜೀರೋ ಡಿಸ್ಚಾರ್ಜ್ FRP ಮಾಡ್ಯುಲರ್ ಶೌಚಾಲಯಗಳನ್ನು ಹೊಂದಿವೆ. ಅಮೃತ್ ಭಾರತ್ ರೈಲುಗಳನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾಗುತ್ತದೆ.

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

    ಅಮೃತ್ ಭಾರತ್ ರೈಲಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸಲಾಗಿದೆ. ಬದಿಯಲ್ಲಿ ಮೊಬೈಲ್ ಹೋಲ್ಡರ್ ಕೂಡ ನೀಡಲಾಗಿದೆ. ಇದರಿಂದ ಮೊಬೈಲ್‌ಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದು.

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

    ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ನೂಕುನುಗ್ಗಲು ಆಗದ ರೀತಿಯಲ್ಲಿ ಇದರ ಕೋಚ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

    6 ವಂದೇ ಭಾರತ್, 2 ಅಮೃತ್ ಭಾರತ್ ಎಕ್ಸ್‌ಪ್ರೆಸ್​​ಗೆ ಚಾಲನೆ ನೀಡಿದ ಮೋದಿ…ಮಾರ್ಗ, ಸಮಯ ಮತ್ತು ದರ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts