More

    6 ವಂದೇ ಭಾರತ್, 2 ಅಮೃತ್ ಭಾರತ್ ಎಕ್ಸ್‌ಪ್ರೆಸ್​​ಗೆ ಚಾಲನೆ ನೀಡಿದ ಮೋದಿ…ಮಾರ್ಗ, ಸಮಯ ಮತ್ತು ದರ ಎಷ್ಟು?

    ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಯಲ್ಲಿದ್ದಾರೆ. ಇಲ್ಲಿ ಮೋದಿ ಅವರು 2 ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಅಯೋಧ್ಯೆ ಧಾಮ್ ಜಂಕ್ಷನ್ ರೈಲ್ವೆ ನಿಲ್ದಾಣವನ್ನು ಪುನರಾಭಿವೃದ್ಧಿಗೊಳಿಸಿದರು. ಇಲ್ಲಿ ನೂತನ ಅಯೋಧ್ಯೆ ವಿಮಾನ ನಿಲ್ದಾಣಕ್ಕೂ ಚಾಲನೆ ನೀಡಲಿದ್ದಾರೆ. ಅಲ್ಲದೆ, ಇಲ್ಲಿ 4 ನೂತನ ಮರುಅಭಿವೃದ್ಧಿ ಮತ್ತು ವಿಸ್ತರಿಸಿದ ರಸ್ತೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

    15,700 ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದು ದೇಶವು ವಂದೇ ಭಾರತ್‌ನಂತಹ ವೇಗದ ಹೊಸ ರೈಲುಗಳನ್ನು ಪಡೆದುಕೊಂಡಿದೆ. ಅದು ಕಡಿಮೆ ದರದಲ್ಲಿ. ಅಷ್ಟೇ ಅಲ್ಲ, ದೇಶದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿಯವರು ಇಂದು ಚಾಲನೆ ನೀಡಿದರು.

    2 ಅಮೃತ್ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭ
    ವಂದೇ ಭಾರತ್ ರೈಲು ಮತ್ತು ಅಮೃತ್ ಭಾರತ್ ರೈಲುಗಳ ವೇಗ ಒಂದೇ ಆಗಿರುತ್ತದೆ. ಈ ಹೊಸ ರೈಲುಗಳು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತವೆ. ಪ್ರಧಾನಿ ಮೋದಿ ಅವರು ಡಿಸೆಂಬರ್ 30 ರಂದು ಅಂದರೆ ಇಂದು ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅಯೋಧ್ಯೆಯನ್ನು ಸೀತಾ ಮಾತೆಯ ಜನ್ಮಸ್ಥಳವಾದ ಬಿಹಾರದ ಸೀತಾಮರ್ಹಿಗೆ ಸಂಪರ್ಕಿಸುತ್ತದೆ. ಈ ರೈಲಿನ ಮಾರ್ಗವು ಬಿಹಾರದ ದರ್ಭಾಂಗಾದಿಂದ ಅಯೋಧ್ಯೆಯ ಮೂಲಕ ದೆಹಲಿಗೆ ಹೋಗಲಿದೆ. ಇಂದು ಮತ್ತೊಂದು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನೂ ಫ್ಲ್ಯಾಗ್ ಆಫ್ ಮಾಡಲಾಗಿದೆ. ಈ ರೈಲು ಮಾಲ್ಡಾದಿಂದ ಬೆಂಗಳೂರಿಗೆ ಹೋಗಲಿದೆ. ಇದಲ್ಲದೇ 6 ಹೊಸ ವಂದೇ ಭಾರತ್ ರೈಲುಗಳಿಗೂ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

    6 ಹೊಸ ವಂದೇ ಭಾರತ್ ರೈಲು ಪ್ರಾರಂಭ
    ಪ್ರಧಾನಿ ಮೋದಿ ಅವರು 6 ಹೊಸ ವಂದೇ ಭಾರತ್ ರೈಲುಗಳಿಗೆ ಡಿಸೆಂಬರ್ 30 ರಂದು ಅಂದರೆ ಇಂದು ಚಾಲನೆ ನೀಡಿದರು. ಈ 6 ಹೊಸ ವಂದೇ ಭಾರತ್ ರೈಲುಗಳು ಅಯೋಧ್ಯೆ-ಆನಂದ ವಿಹಾರ್ ವಂದೇ ಭಾರತ್, ನವದೆಹಲಿ-ವೈಷ್ಣೋದೇವಿ ವಂದೇ ಭಾರತ್, ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್, ಅಮೃತಸರ-ನವದೆಹಲಿ ವಂದೇ ಭಾರತ್, ಜಲ್ನಾ-ಮುಂಬೈ ವಂದೇ ಭಾರತ್ ಮತ್ತು ಕೊಯಮತ್ತೂರು-ಬೆಂಗಳೂರು ವಂದೇ ಭಾರತ್.

    ದೆಹಲಿಯಿಂದ ಅಯೋಧ್ಯೆಗೆ ಹೋಗುವುದು ಸುಲಭ
    ಜನವರಿ 22 ರಂದು ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ. ಅಯೋಧ್ಯೆಗೆ ಸುಲಭವಾಗಿ ತಲುಪಲು ರೈಲ್ವೇ ದೇಶಾದ್ಯಂತ ಅನೇಕ ಹೊಸ ರೈಲುಗಳನ್ನು ಓಡಿಸಲಿದೆ. ನೀವು ದೆಹಲಿಯಿಂದ ಅಯೋಧ್ಯೆಗೆ ಹೋಗಬೇಕಾದರೆ ವಂದೇ ಭಾರತ್ ರೈಲಿನಲ್ಲಿ ಹೋಗಬಹುದು. ಇಂದು ಅಂದರೆ ಡಿಸೆಂಬರ್ 30 ರಂದು ದೆಹಲಿ-ಅಯೋಧ್ಯೆ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಫ್ಲ್ಯಾಗ್ ಆಫ್ ಮಾಡಿದರು. ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನಿಂದ ಅಯೋಧ್ಯೆಗೆ ಹೋಗುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲು ಸಂಖ್ಯೆ 22426. ಇದು ವಾರದಲ್ಲಿ ಆರು ದಿನ ಓಡಲಿದೆ. ಈ ರೈಲು ಬುಧವಾರ ಓಡುವುದಿಲ್ಲ.

    ರೈಲುಗಳ ಸಮಯ
    ವಂದೇ ಭಾರತ್ ಎಕ್ಸ್‌ಪ್ರೆಸ್ ಆನಂದ್ ವಿಹಾರ್ ಟರ್ಮಿನಲ್‌ನಿಂದ ಬೆಳಗ್ಗೆ 6:10 ಕ್ಕೆ ಹೊರಡಲಿದೆ. ಈ ರೈಲು ಬೆಳಗ್ಗೆ 11 ಗಂಟೆಗೆ ಕಾನ್ಪುರ ತಲುಪಲಿದೆ. ಇದು ಮಧ್ಯಾಹ್ನ 12:25 ಕ್ಕೆ ಲಕ್ನೋ ತಲುಪಿ 12:30 ಕ್ಕೆ ಹೊರಡಲಿದೆ. ಇದರ ನಂತರ, ಈ ರೈಲು ಮಧ್ಯಾಹ್ನ 2:35 ಕ್ಕೆ ಅಯೋಧ್ಯೆಗೆ ತಲುಪಲಿದೆ.
    ಪ್ರತಿಯಾಗಿ, ರೈಲು ಸಂಖ್ಯೆ 22425 ವಂದೇ ಭಾರತ್ ಎಕ್ಸ್‌ಪ್ರೆಸ್ ಅಯೋಧ್ಯೆಯಿಂದ ಮಧ್ಯಾಹ್ನ 3:15 ಕ್ಕೆ ಹೊರಡಲಿದೆ. ಸಂಜೆ 5:15ಕ್ಕೆ ಲಕ್ನೋ ತಲುಪಲಿದೆ. ಸಂಜೆ 5:20ಕ್ಕೆ ಇಲ್ಲಿಂದ ಹೊರಡಲಿದೆ. ಈ ರೈಲು ಲಕ್ನೋದಿಂದ ಕಾನ್ಪುರ ತಲುಪಿ ಅಲ್ಲಿಂದ ಸಂಜೆ 6:35ಕ್ಕೆ ಹೊರಡಲಿದೆ. ಇದಾದ ನಂತರ ರಾತ್ರಿ 11:40 ಕ್ಕೆ ಆನಂದ್ ವಿಹಾರ್ ತಲುಪಲಿದೆ. ಆನಂದ್ ವಿಹಾರ್‌ನಿಂದ ಅಯೋಧ್ಯೆಗೆ ಎಸಿ ಚೇರ್‌ಕಾರ್ ದರ ಸುಮಾರು 1,420 ರೂ. ಆದರೆ, ಎಕ್ಸಿಕ್ಯೂಟಿವ್ ವರ್ಗದ ದರ 2,760 ರೂ.

    ಅಮೃತ್ ಭಾರತ್ ರೈಲು ದರ
    ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನ ದರವು ವಂದೇ ಭಾರತ್‌ಗಿಂತ ತುಂಬಾ ಕಡಿಮೆಯಾಗಿದೆ. ಇದು ನಾನ್ ಎಸಿ ರೈಲು. ಈ ರೈಲಿನಲ್ಲಿ ಒಂದು ಕಿಲೋಮೀಟರ್​​​​​​​​​ನಿಂದ 50 ಕಿಲೋಮೀಟರ್ ಪ್ರಯಾಣಿಸಲು ಕನಿಷ್ಠ ದರ 35 ರೂ. ಇದು ಮೀಸಲಾತಿ ಮತ್ತು ಇತರ ಶುಲ್ಕಗಳನ್ನು ಒಳಗೊಂಡಿಲ್ಲ. ರೈಲ್ವೇ ಅಧಿಕಾರಿಗಳ ಪ್ರಕಾರ, ಅಮೃತ್ ಭಾರತ್ ರೈಲಿನ ಸ್ಲೀಪರ್ ಮತ್ತು ಸೆಕೆಂಡ್ ಕ್ಲಾಸ್ ದರಗಳು ಈಗಿರುವ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗಿಂತ 15 ರಿಂದ 17 ಪ್ರತಿಶತ ಹೆಚ್ಚಾಗಿರುತ್ತದೆ. 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts