More

    ಭಾರತದ ಪ್ರಥಮ ಜಲಾಂತರ ಮೆಟ್ರೋ ಮಾರ್ಗ: ಶೀಘ್ರದಲ್ಲಿಯೇ ಆರಂಭ

    ನವದೆಹಲಿ: ದೇಶದ ಪ್ರಮುಖ ನಗರದಲ್ಲಿ ಮೆಟ್ರೋ ರೈಲು ಜಾಲ ವ್ಯಾಪಕ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ. ಈಗ ಮಹಾನಗರವೊಂದರಲ್ಲಿ ನೀರಿನೊಳಗೂ ಮೆಟ್ರೋ ರೈಲು ಓಡಲಿದೆ!

    ದೇಶದ ಮೊದಲ ನೀರೊಳಗಿನ ಮೆಟ್ರೋ ನೆಟ್‌ವರ್ಕ್‌ನ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಭಾರತೀಯ ರೈಲ್ವೆ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೆಟ್ರೋ ಜಾಲವು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಒಂದು ಭಾಗವಾಗಿದೆ. ನೀರೊಳಗಿನ ಈ ಕಾರಿಡಾರ್ ಹೌರಾ ಮೈದಾನದಿಂದ ಎಸ್‌ಪ್ಲೇನೇಡ್ ವರೆಗೆ ವ್ಯಾಪಿಸಿದೆ. ಈ ವ್ಯಾಪ್ತಿಯಲ್ಲಿನ ನಿಲ್ದಾಣಗಳು ಕಾರ್ಯಾರಂಭಕ್ಕೆ ಬಹುತೇಕ ಸಿದ್ಧವಾಗಿವೆ. ರೈಲ್ವೆ ಮಂಡಳಿ ಅಧ್ಯಕ್ಷರು ಕೂಡ ನೀರೊಳಗಿನ ಮೆಟ್ರೋ ಮಾರ್ಗವನ್ನು ಪರಿಶೀಲಿಸಿದ್ದಾರೆ.

    ರೈಲ್ವೆ ಮಂಡಳಿಯ ಸಿಇಒ ಜಯ ವರ್ಮ ಸಿನ್ಹಾ ಅವರು ಹೌರಾ ಮೈದಾನದಿಂದ ಪೂರ್ವ-ಪಶ್ಚಿಮ ಮೆಟ್ರೋದ ಎಸ್‌ಪ್ಲೇನೇಡ್ ಮಾರ್ಗ ಪರಿಶೀಲಿಸಿದರು. ಹೌರಾ ಮೈದಾನ ನಿಲ್ದಾಣದಿಂದ ಆರಂಭಗೊಂಡು, ಹೂಗ್ಲಿ ನದಿಯ ಕೆಳಗಿರುವ ಮೆಟ್ರೋದಲ್ಲಿ ಎಸ್‌ಪ್ಲೇನೇಡ್ ನಿಲ್ದಾಣದವರೆಗೆ ಸಿನ್ಹಾ ಪ್ರಯಾಣಿಸಿದರು. ಮೆಟ್ರೋ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ ಉದಯ್ ಕುಮಾರ್ ರೆಡ್ಡಿ ಮತ್ತು ಮೆಟ್ರೋ ಮತ್ತು ಕೋಲ್ಕತ್ತಾ ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಕೆಎಂಆರ್‌ಸಿಎಲ್) ಹಿರಿಯ ಅಧಿಕಾರಿಗಳು ಅವರೊಂದಿಗೆ ಇದ್ದರು.

    ಸಿನ್ಹಾ ಅವರು ಹೌರಾ ಮೈದಾನದಿಂದ ಹೌರಾ ನಿಲ್ದಾಣದವರೆಗೆ ಮೆಟ್ರೋದ ಮೋಟರ್‌ಮ್ಯಾನ್ ಕ್ಯಾಬಿನ್‌ನಲ್ಲಿ ಪ್ರಯಾಣಿಸಿದರು. ಪೂರ್ವ ಮತ್ತು ಆಗ್ನೇಯ ರೈಲ್ವೆಯೊಂದಿಗೆ ಮೆಟ್ರೋ ರೈಲ್ವೆಯ ಪ್ಯಾಸೆಂಜರ್ ಇಂಟರ್ಚೇಂಜಿಂಗ್ ಪಾಯಿಂಟ್‌ಗಳನ್ನು ಪರಿಶೀಲಿಸಿದರು. ನಂತರ, ಮೂರು ರೈಲ್ವೆಗಳ ನಡುವೆ ಪ್ರಯಾಣಿಕರ ಸುಗಮ ಪ್ರಯಾಣ ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಹೌರಾ ಮೈದಾನದಿಂದ ಎಸ್‌ಪ್ಲೇನೇಡ್ವರೆಗಿನ ಪೂರ್ವ-ಪಶ್ಚಿಮ ಮೆಟ್ರೋದ 4.8-ಕಿಮೀ ಉದ್ದದ ಈ ಮಾರ್ಗವು ಇನ್ನೊಂದು ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಬಹುದಾಗಿದೆ.

    10 ವರ್ಷಗಳಲ್ಲಿ ಶೇಕಡಾ 50ರಷ್ಟು ಮಹಿಳಾ ಸಿಎಂ ಮಾಡುವುದು ಕಾಂಗ್ರೆಸ್​ ಗುರಿಯಾಗಲಿ: ರಾಹುಲ್​ ಪ್ರತಿಪಾದನೆ

    ಎಕ್ಸಿಟ್​ ಪೋಲ್​ ನಂತರ ಮರಭೂಮಿ ರಾಜ್ಯದಲ್ಲಿ ರಾಜಕೀಯ ತಾಪಮಾನ ಉಲ್ಬಣ: ಮಿತ್ರರ ಅನ್ವೇಷಣೆಯಲ್ಲಿ ಬಿಜೆಪಿ, ಕಾಂಗ್ರೆಸ್​

    ನವೆಂಬರ್​ ಮಾಸದ ಜಿಎಸ್​ಟಿ ಸಂಗ್ರಹ; ಕರ್ನಾಟಕಕ್ಕೆ ಮತ್ತೆ ಎರಡನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts