More

    ಎಕ್ಸಿಟ್​ ಪೋಲ್​ ನಂತರ ಮರಭೂಮಿ ರಾಜ್ಯದಲ್ಲಿ ರಾಜಕೀಯ ತಾಪಮಾನ ಉಲ್ಬಣ: ಮಿತ್ರರ ಅನ್ವೇಷಣೆಯಲ್ಲಿ ಬಿಜೆಪಿ, ಕಾಂಗ್ರೆಸ್​

    ಜೈಪುರ: ಮತಗಟ್ಟೆ ಸಮೀಕ್ಷೆಗಳ ನಂತರ ಮರುಭೂಮಿ ರಾಜ್ಯದ ರಾಜಕೀಯ ತಾಪಮಾನವು ತೀವ್ರವಾಗಿ ಏರಿದೆ, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಕುರಿತು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳು ಈಗಾಗಲೇ ಸರ್ಕಾರ ರಚಿಸಲು ಅನುಕೂಲವಾಗುವಂತೆ ಸಂಭಾವ್ಯ ಮಿತ್ರರ ಅನ್ವೇಷಣೆಯಲ್ಲಿ ತೊಡಗಿವೆ.

    ಬಹುತೇಕ ಎಕ್ಸಿಟ್ ಪೋಲ್‌ಗಳು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಪೈಟ್​ ಇರುವುದಾಗಿ ಹೇಳಿವೆ. ಅಲ್ಲದೆ, ಅಲ್ಪ ಬಹುಮತದೊಂದಿಗೆ ಗೆಲ್ಲಲಿವೆ ಇಲ್ಲವೇ ಬಹುಮತಕ್ಕೆ ಸ್ವಲ್ಪ ಕೊರತೆ ಅನುಭವಿಸಲಿವೆ ಎಂದು ಅಂದಾಜಿಸಿವೆ. ಹೀಗಾಗಿ, ಎರಡೂ ರಾಷ್ಟ್ರೀಯ ಪಕ್ಷಗಳು ಇತರ ಸಣ್ಣ ಪಕ್ಷಗಳ ಬೆಂಬಲ ಪಡೆಯುವಲ್ಲಿ ಈಗಾಗಲೇ ನಿರತವಾಗಿವೆ. ಹೇಗಾದರೂ ಮಾಡಿ ರಾಜ್ಯದಲ್ಲಿ ಬಹುಮತ ಗಳಿಸಿಕೊಳ್ಳಬೇಕೆಂದು ಉಭಯ ಪಕ್ಷಗಳ ನಾಯಕರು ಕಸರತ್ತಿನಲ್ಲಿ ತೊಡಗಿದ್ದಾರೆ.

    ಉಭಯ ಪಕ್ಷಗಳ ನಾಯಕರ ಕಣ್ಣುಗಳು ಈಗ 15 ರಿಂದ 20 ಬಂಡಾಯ, ಪಕ್ಷೇತರ ಮತ್ತು ಇತರ ಪಕ್ಷದ ಅಭ್ಯರ್ಥಿಗಳ ಮೇಲೆ ಕೇಂದ್ರೀಕೃತವಾಗಿವೆ, ರಾಜಸ್ಥಾನದಲ್ಲಿ ಸರ್ಕಾರ ರಚನೆಯಲ್ಲಿ ಇವರು ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳು ದಟ್ಟವಾಗಿವೆ.

    ಉದಾಹರಣೆಗೆ, ಚಿತ್ತೋರ್‌ಗಢ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಚಂದ್ರಭಾನ್ ಸಿಂಗ್ ಅಕಿಯಾ ಅವರು ಎರಡು ಬಾರಿ ಪಕ್ಷದ ಶಾಸಕರಾಗಿದ್ದಾರೆ, ಕೇಸರಿ ಪಕ್ಷದಿಂದ ಟಿಕೆಟ್ ನಿರಾಕರಿಸದ ಕಾರಣ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇವರು ಗೆಲ್ಲುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

    ಇದೇ ರೀತಿ ಬಾರ್ಮರ್ ಜಿಲ್ಲೆಯ ಶಿವ ಕ್ಷೇತ್ರದಲ್ಲಿ ಬಿಜೆಪಿ ಯುವ ಬಂಡಾಯಗಾರ ರವೀಂದ್ರ ಸಿಂಗ್ ಭಾಟಿ ಅವರು ಚುನಾವಣೆ ಕದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಮುಂದಿದ್ದಾರೆ ಎಂದು ವರದಿಯಾಗಿದೆ.

    ಈ ರೀತಿಯ ಪಕ್ಷೇತರರು ಮತ್ತು ಬಂಡಾಯಗಾರರು ಅಂತಿಮವಾಗಿ ಜಯ ಗಳಿಸಿ, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದಾಗಿದೆ.

    ಸಣ್ಣ ಪಕ್ಷಗಳು ಕಿಂಗ್‌ ಮೇಕರ್‌?:

    ಹನುಮಾನ್ ಬೇನಿವಾಲ್ ಅವರ ಆರ್‌ಎಲ್‌ಪಿ ಅಥವಾ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿಯಂತಹ ಸಣ್ಣ ಪಕ್ಷಗಳು ವಿಶೇಷವಾಗಿ ರಾಜಸ್ಥಾನದ ಜಾಟ್ ಬೆಲ್ಟ್‌ನಲ್ಲಿ ಬೆರಳೆಣಿಕೆಯಷ್ಟು ಸ್ಥಾನಗಳನ್ನು ಪಡೆಯಬಹುದಾಗಿದೆ. ಅಂತೆಯೇ ದಕ್ಷಿಣ ರಾಜಸ್ಥಾನದ ಬುಡಕಟ್ಟು ಪ್ರದೇಶದಲ್ಲಿ, BAP ಅಥವಾ ಭಾರತೀಯ ಆದಿವಾಸಿ ಪಕ್ಷವು ಕೆಲವು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

    ಇದೇ ರೀತಿ, ಪೂರ್ವ ರಾಜಸ್ಥಾನದಲ್ಲಿ ಮಾಯಾವತಿಯವರ ಬಿಎಸ್​ಪಿ ಕೆಲವು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ, ಹಿಂದಿನ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಎಸ್​ಪಿ ಅರ್ಧ ಡಜನ್ ಸ್ಥಾನಗಳನ್ನು ಗಳಿಸಿತ್ತು. ಹೀಗಾಗಿ, ಈ ಬಾರಿ ಸರ್ಕಾರ ರಚನೆಯಲ್ಲಿ ಈ ಪಕ್ಷ ಪ್ರಮುಖ ಪಾತ್ರ ವಹಿಸಬಹುದು.

    “ಎಕ್ಸಿಟ್ ಪೋಲ್‌ಗಳು ಎರಡೂ ಪಕ್ಷಗಳ ಲೆಕ್ಕಾಚಾರಗಳನ್ನು ಸುಳ್ಳಾಗಿಸಲಿವೆ ಎಂದು ತೋರಿಸಿವೆ. ನಮ್ಮ ಪಕ್ಷವು 10 ಸ್ಥಾನಗಳನ್ನು ಗೆಲ್ಲುತ್ತದೆ. ರಾಜಸ್ಥಾನದಲ್ಲಿ ನಾವು ಕಿಂಗ್‌ ಮೇಕರ್‌ಗಳಾಗುತ್ತೇವೆ ಎಂದು ನಾನು ಭಾವಿಸುತ್ತೇನೆ ” ಎಂದು ದಕ್ಷಿಣ ರಾಜಸ್ಥಾನದ ಬುಡಕಟ್ಟು ಪಕ್ಷದ ಬಿಎಪಿಯ ಉನ್ನತ ನಾಯಕ ರಾಜ್‌ಕುಮಾರ್ ರಾವುತ್ ಹೇಳುತ್ತಾರೆ.

    ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಅವರು ಎಲ್ಲಾ ಪಕ್ಷೇತರರು, ಬಂಡಾಯಗಾರರು ಮತ್ತು ಸಣ್ಣ ಪಕ್ಷಗಳನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಪಕ್ಷಕ್ಕೆ ಬೆಂಬಲವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

    ಎಕ್ಸಿಟ್ ಪೋಲ್‌ಗಳು ಸಾಕಷ್ಟು ಅನಿಶ್ಚಿತತೆ ತೋರಿಸಿದ್ದರೂ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳುವ ಹಾದಿಯಲ್ಲಿದೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪ್ರತಿಪಾದಿಸಿದ್ದಾರೆ. “ಬಿಜೆಪಿ ತನ್ನ ಧರ್ಮದ ಕಾರ್ಡ್ ಮೂಲಕ ಜನರನ್ನು ದಾರಿ ತಪ್ಪಿಸದ ಹೊರತು ನಾವು ಮುಂದಿನ ಸರ್ಕಾರವನ್ನು ರಚಿಸುತ್ತೇವೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂದು ಗೆಹ್ಲೋಟ್ ಹೇಳಿದ್ದಾರೆ.

    ಇದೇ ರೀತಿ, ಬಿಜೆಪಿಯ ಕಡೆಯಿಂದ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಈ ಹಿಂದೆ ತಮ್ಮ ನಿಷ್ಠಾವಂತರು ಎಂದು ಪರಿಗಣಿಸಲ್ಪಟ್ಟ ಮತ್ತು ಈಗ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಹೇಳಲಾದ ಹಲವಾರು ಬಂಡಾಯಗಾರರನ್ನು ಸದ್ದಿಲ್ಲದೆ ಸಂಪರ್ಕಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದರ ಜತೆಗೆ, ರಾಜ್ಯ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ. ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಂಭಾವ್ಯ ಮಿತ್ರರನ್ನು ಸಂಪರ್ಕಿಸುತ್ತಿದ್ದರು, ಬಂಡಾಯಗಾರರು, ಪಕ್ಷೇತರರನ್ನು ಸೆಳೆಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

    ರಾಜ್ಯಪಾಲರ ಪಾತ್ರ ನಿರ್ಣಾಯಕ:

    ಎಕ್ಸಿಟ್ ಪೋಲ್ ಟ್ರೆಂಡ್‌ಗಳ ಪ್ರಕಾರವೇ ಭಾನುವಾರ (ಡಿ. 3) ಮತ ಎಣಿಕೆಯಲ್ಲಿ ತೀರ್ಪು ಬಂದರೆ, ರಾಜ್ಯಪಾಲರ ಪಾತ್ರವು ನಿರ್ಣಾಯಕವಾಗಿರುತ್ತದೆ, ಏಕೆಂದರೆ ಎರಡು ಪ್ರಮುಖ ಪಕ್ಷಗಳು ಸ್ಪಷ್ಟ ಬಹುಮತವನ್ನು ಪಡೆಯುವುದಿಲ್ಲ.ಇತಹ ಸನ್ನಿವೇಶದಲ್ಲಿ, ಸರ್ಕಾರ ರಚಿಸಲು ಯಾರನ್ನು ಆಹ್ವಾನಿಸಲಾಗುತ್ತದೆ ಎಂಬುದರಲ್ಲಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ.

    ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜೈಪುರದ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಅವರ ನಿವಾಸದಲ್ಲಿ ಗುರುವಾರ ಭೇಟಿಯಾಗಿದ್ದಾರೆ. ಈ ಸಭೆಯ ನಂತರ ಗೆಹ್ಲೋಟ್ ಅವರು, ಇದು ಕೇವಲ ಸೌಜನ್ಯದ ಭೇಟಿ ಎಂದು ಹೇಳಿಕೊಂಡರೂ, ಅವರು ರಾಜ್ಯಪಾಲರೊಂದಿಗೆ ಕೆಲವು ಪ್ರಮುಖ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

    ನವೆಂಬರ್​ ಮಾಸದ ಜಿಎಸ್​ಟಿ ಸಂಗ್ರಹ; ಕರ್ನಾಟಕಕ್ಕೆ ಮತ್ತೆ ಎರಡನೇ ಸ್ಥಾನ

    ತೆಲಂಗಾಣ ವಿಧಾನಸಭೆ ಚುನಾವಣೆ: ಮತದಾನ ಪ್ರಮಾಣ ಶೇ.70.60

    ಏನಿದು ಪಕಡವಾ ವಿವಾಹ?: ಗನ್​ ಪಾಯಿಂಟ್​ನಲ್ಲಿ ಶಿಕ್ಷಕನಿಗೆ ಬಲವಂತದ ಮದುವೆ

    ಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts